ದೀರ್ಘಾಯುಷ್ಯ ಕೇಂದ್ರಕ್ಕೆ ನಟ ಪುನೀತ್ ಹೆಸರು – ಸಚಿವ ಅಶ‍್ವಥ್ ನಾರಾಯಣ್.

ಬೆಂಗಳೂರು,ಮೇ,12,2022(www.justkannada.in):  ಅಕಾಲಿಕ ಮರಣವನ್ನು ತಡೆಯಲು ದೀರ್ಘಾಯುಷ್ಯ ಮತ್ತು ಸಾಂಕ್ರಾಮಿಕ ರೋಗಗಳಿಗೆ ಲಸಿಕೆ/ಔಷಧಿ ಕಂಡುಹಿಡಿಯುವ ಸದುದ್ದೇಶದಿಂದ ಸದ್ಯದಲ್ಲೇ ಎಲೆಕ್ಟ್ರಾನಿಕ್ ಸಿಟಿಯಲ್ಲಿ  ‘ದೀರ್ಘಾಯುಷ್ಯ’ (ಲಾಂಗಿವಿಟಿ ಸೆಂಟರ್) ಮತ್ತು ಸಾಂಕ್ರಾಮಿಕ ರೋಗ ಪರಿಹಾರ ಸಂಶೋಧನಾ ಕೇಂದ್ರಗಳನ್ನು ತೆರೆಯಲಾಗುವುದು. ಈ ಪೈಕಿ ದೀರ್ಘಾಯುಷ್ಯ ಸಂಶೋಧನಾ ಕೇಂದ್ರಕ್ಕೆ ಇತ್ತೀಚೆಗೆ ನಮ್ಮನ್ನು ಅಗಲಿದ ನಟ ಪುನೀತ್ ರಾಜಕುಮಾರ್ ಅವರ ಹೆಸರನ್ನು ಇಡಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ್ ಹೇಳಿದ್ದಾರೆ.

ಐಟಿ ಮತ್ತು ಬಿಟಿ ಇಲಾಖೆಯ ಪ್ರತಿಷ್ಠಿತ ಉಪಕ್ರಮವಾದ `ಬೆಂಗಳೂರು ಬಯೋ-ಇನ್ನೋವಶನ್ ಸೆಂಟರ್’ (ಬಿಬಿಸಿ)ನ ಬೆಂಬಲದ ಮೂಲಕ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 6 ಜೀವವಿಜ್ಞಾನ ಸಾಧನಗಳನ್ನು ಅವರು ಎಲೆಕ್ಟ್ರಾನಿಕ್ ಸಿಟಿಯಲ್ಲಿನ ಹೆಲಿಕ್ಸ್ ಬಿಟಿ ಪಾರ್ಕ್ ನಲ್ಲಿ ಗುರುವಾರ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, `ಸಾಂಕ್ರಾಮಿಕ/ಅಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಲು ರಕ್ತ, ಎಂಜಲು, ಮಲ, ಮೂತ್ರ, ಕಫ ಇತ್ಯಾದಿಗಳನ್ನು ಸಂಗ್ರಹಿಸಲು ಸೂಕ್ತ ವ್ಯವಸ್ಥೆ ಬೇಕಾಗಿದೆ. ಇದಕ್ಕಾಗಿ, ಬಿಬಿಸಿ ಉಪಕ್ರಮದಡಿಯಲ್ಲಿ ದೇಶದ ಮೊಟ್ಟಮೊದಲ ಬಯೋ-ಬ್ಯಾಂಕಿಂಗ್ ಮತ್ತು ಸಂಗ್ರಹ ಮಾದರಿಗಳ ಕೋಶವನ್ನು ಕೂಡ ಸ್ಥಾಪಿಸಲಾಗುವುದು. ಇದರಿಂದ ಇಡೀ ರಾಜ್ಯದಲ್ಲಿ ರೋಗನಿದಾನ ಶಾಸ್ತ್ರವು ಮತ್ತಷ್ಟು ವೈಜ್ಞಾನಿಕವಾಗಿ ನಡೆಯಲಿದೆ’ ಎಂದು ನುಡಿದರು. ಈ ಮೂರು ಕೇಂದ್ರಗಳು ಎಲೆಕ್ಟ್ರಾನಿಕ್ ಸಿಟಿಯ ಬಿಬಿಸಿ ಯಲ್ಲೆ ಸ್ಥಾಪಿಸಲಾಗುವುದು ಎಂದರು.

ಆರೋಗ್ಯ ಕ್ಷೇತ್ರದಲ್ಲಿ ಆವಿಷ್ಕಾರದ ತುರ್ತಿದೆ. ಇಂದು ಬಿಡುಗಡೆಯಾಗಿರುವ ಸಾಧನಗಳಿಂದ ಡಿಎನ್ಎ/ಆರ್.ಎನ್.ಎ ಪರೀಕ್ಷೆಗಳು, ಕೋವಿಡ್ ಸ್ವಯಂ ಪರೀಕ್ಷೆ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ಪತ್ತೆ, ವರ್ಚುಯಲ್ ರಿಯಾಲಿಟಿ ವಿಧಾನದಲ್ಲಿ ಕಣ್ಣಿನ ಪರೀಕ್ಷೆ, ಶ್ವಾಸಕೋಶ ಮತ್ತು ಹೃದಯದ ಮೇಲಿನ ಒತ್ತಡಗಳನ್ನು ಸುಲಭವಾಗಿ ಮತ್ತು ಶೀಘ್ರವಾಗಿ ಪತ್ತೆ ಹಚ್ಚಬಹುದು ಎಂದು ಸಚಿವ ಅಶ್ವಥ್ ನಾರಾಯಣ್ ಮಾಹಿತಿ ನೀಡಿದರು.

ಬಿಬಿಸಿ ಉಪಕ್ರಮದ ಮೂಲಕ ಇದುವರೆಗೂ 150ಕ್ಕೂ ಹೆಚ್ಚು ನವೋದ್ಯಮಗಳು ಮತ್ತು ವೈಯಕ್ತಿಕ ಉದ್ಯಮಿಗಳಿಗೆ ಸರಕಾರದ ನಾನಾ ಯೋಜನೆಗಳ ಮೂಲಕ ರಚನಾತ್ಮಕ ಬೆಂಬಲ ನೀಡಲಾಗಿದೆ. ಸದ್ಯಕ್ಕೆ 50 ನವೋದ್ಯಮಗಳಿಗೆ ಇದರ ಮುಖಾಂತರ ಪರಿಪೋಷಣೆಯನ್ನು ಒದಗಿಸಲಾಗುತ್ತಿದೆ. ಅಲ್ಲದೆ, ಕೋವಿಡ್ ಸಾಂಕ್ರಾಮಿಕದ ಪರಿಣಾಮಕಾರಿ ನಿರ್ವಹಣೆಗೆ ನೆರವು ನೀಡುವಂತಹ 22 ಉತ್ಪನ್ನಗಳನ್ನು ಕೇವಲ ಎರಡು ವರ್ಷಗಳಲ್ಲಿ ಸಾರ್ವಜನಿಕ ಉಪಯೋಗಕ್ಕೆ ಬಿಡುಗಡೆ ಮಾಡಲಾಗಿದೆ’ ಎಂದರು.

ಬಿಬಿಸಿ ಪರಿಪೋಷಣೆ ಪಡೆದಿರುವ ಕಂಪನಿಗಳ ಮೌಲ್ಯವು 800 ಕೋಟಿ ರೂ.ಗಳಿಗಿಂತ ಹೆಚ್ಚಾಗಿದೆ. ಇದರ ಜೊತೆಗೆ, 1,000ಕ್ಕೂ ಹೆಚ್ಚು ಉದ್ಯೋಗಗಳು ಕೂಡ ಇಲ್ಲಿ ಸೃಷ್ಟಿಯಾಗಿವೆ. ಜೀವವಿಜ್ಞಾನಗಳ ಅಡಿ ಬರುವ ಆರೋಗ್ಯ ರಕ್ಷಣೆ, ಬಯೋಫಾರ್ಮಾ, ಕೃಷಿ, ಆಹಾರ ಮತ್ತು ಪೌಷ್ಟಿಕತೆ, ಔದ್ಯಮಿಕ ಮತ್ತು ಪರಿಸರ ಜೈವಿಕ ತಂತ್ರಜ್ಞಾನ ಮತ್ತು ಮೆಡ್-ಟೆಕ್ ಕ್ಷೇತ್ರಗಳಲ್ಲಿ ತೊಡಗಿಕೊಂಡಿರುವ ಉದ್ಯಮಿಗಳ ಅಗತ್ಯಗಳನ್ನು ಗಮನಿಸಿ, ಅವುಗಳನ್ನು ಸುಗಮವಾಗಿ ಪೂರೈಸಲು ಈ ಕೇಂದ್ರದ ಮೂಲಕ ಮಹತ್ತ್ವದ ನೆರವು ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಐಟಿ-ಬಿಟಿ ಇಲಾಖೆಯ ನಿರ್ದೇಶಕಿ ಮೀನಾ ನಾಗರಾಜ್, ಬಿಟಿ ವಿಷನ್ ಗ್ರೂಪ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ, ಹೆಸರಾಂತ ಕ್ಯಾನ್ಸರ್ ತಜ್ಞ ಡಾ.ವಿಶಾಲ್ ರಾವ್, ಬೆಂಗಳೂರು ಬಯೋ-ಇನ್ನೋವೇಶನ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಡಾ.ಜಿತೇಂದ್ರ ಕುಮಾರ್ ಉಪಸ್ಥಿತರಿದ್ದರು.

ನೂತನ ಉತ್ಪನ್ನಗಳ ವಿವರ

ಕಾರ್ಯಕ್ರಮದಲ್ಲಿ ನವೋದ್ಯಮಗಳಾದ ಓಮಿಕ್ಸ್ ಲ್ಯಾಬ್ಸ್, ನಿಯೋಡಿಎಕ್ಸ್, ಡಿಪಾನ್ ಇಡಿ ಬಯೋಇಂಟೆಲಿಜೆನ್ಸ್, ಆಲ್ಫಾಲಿಯಸ್ ಮತ್ತು ಟ್ಯಾಂಟ್ರೋಟೊಲನ್ ಅಭಿವೃದ್ಧಿ ಪಡಿಸಿರುವ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಇವುಗಳಲ್ಲಿ ಡಿಎನ್ಎ/ಆರೆ.ಎನ್.ಎ ಮಾದರಿ ಸಂಗ್ರಹಿಸುವ ಸ್ವಯಂಚಾಲಿತ ಸಾಧನ, ಲ್ಯಾಂಪ್ ಮಾಸ್ಟರ್ ಮಿಕ್ಸ್, ನಿಯೋಚೆಕ್ ರ್ಯಾಪಿರ್ ಆ್ಯಂಟಿಜೆನ್ ಸ್ವಯಂಪರೀಕ್ಷಾ ಕಿಟ್, ಪಿಸಿಆರ್ ಪತ್ತೆ ಕಿಟ್, ಸಿಟಿಸಿ ಸೆಪರೇಷನ್ ಟ್ಯೂಬ್ ಮತ್ತು ಇಂಟೆಲಿಜೆಂಟ್ ವಿಷನ್ ಅನಲೈಸರ್ (ಐವಿಎ) ಇವೆ. ಇವುಗಳ ಪೈಕಿ ಕೆಲವು ಸಾಧನಗಳಿವೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಾನ್ಯತೆ ಕೂಡ ಸಿಕ್ಕಿದೆ.

Key words: Actor Punith rajkumar – name – longevity center-Minister -Ashwagath Narayan.

ENGLISH SUMMARY…

Longevity Centre to be named after Dr Puneeth Rajkumar says IT/BT Minister

Government to set up Pandemic Centre, Bio- Centre at the BBC

Bengaluru: In a bid to improve the health care infrastructure and the well-being of its citizens by leveraging biotechnology, the government of Karnataka plans to establish a Pandemic Centre, a Longevity Centre and a Bio-Centre at the Bangalore Bioinnovation Centre (BBC- Electronic City), Dr C N Aswath Narayan, Minister for IT/BT and S&T said on Thursday. The Longevity Centre will be named after Kannada superstar late Puneeth Rajkumar who died a few months back.

Speaking after launching the products developed by startups incubated by Bangalore Bio-innovation Centre (BBC)- entrepreneurship and translational research centre- of the department of IT/BT, he said, while the Pandemic Centre will facilitate the development of vaccines and medicines, the Longevity Centre named after the late actor hopes to curtail the untimely death of citizens. The Bio-Centre will cater to the needs of tissue samples required for R&D and innovations, the minister explained. The Bio-Banking which is to be set up will be the first of its kind in the country, he further added.

Bio-Centre will also facilitate the storage of biological materials such as throat swabs, urine, phlegm etc, along with tissue samples. This in turn will enable speeding up the identification of infectious/non-infectious diseases, he informed. Minister added this facility will further strengthen the pathological study of diseases.

“Currently the centre physically incubates 50 startups. BBC has facilitated the product launch of more than 30 products on national platforms among which 22 products were related to COVID mitigation. Ever since it started functioning in 2015, BBC has supported 150+ startups/Individuals through government schemes, physical incubation, funding and mentoring. About 1000 employments have been generated by its Incubates”, Narayan stated.

The total valuation of companies Incubated by BBC is around Rs 800 Crores and it has been working in the areas of Life Sciences, Agriculture, Food/Nutrition, Industrial Biotechnology and Environmental Biotechnology, he told.

The products launched were, DNA/RNA Extraction Automation Device & 1b) LAMP Master Mix (by Omix R & D Labs) which allows for fully automated DNA or RNA extraction for research purposes, NeoCheck Rapid Antigen Self-Testing Kit (NeoDx Biotech Labs) for the qualitative detection of SARS-CoV-2 in symptomatic & asymptomatic individuals, ReDx TripleH HIV, HBV, HCV RTPCR Detection Kit (by NeoDx Biotech Labs) to ensure an adequate supply of blood free from infectious diseases, Merisis™ CTC separation tube (by DiponED BioIntelligence) for separating disseminated circulating tumour cells from human peripheral blood, Intelligent Vision Analyser (iVA) (by Alfaleus Tech) for performing multiple types of eye tests, Svasthya (by Tantrotollan Solutions) for AI-based monitoring of respiratory and cardiac distress in patients using non-invasive bio-marking, and UPPER Ultraflo Mini (Innodeev Solutions) for ensuring breathable filtered air.

Kiran Majumdar Shaw, Chairperson, State Vision Group for BT, renowned Oncologist Dr Vishal Rao, Dr Jitendra Kumar, Managing Director, (BBC), Meena Nagaraj, MD, Karnataka Innovative Technology Society (KITS) and others were present.