ಬೆಂಗಳೂರು, ಸೆಪ್ಟೆಂಬರ್ 07, 2019 (www.justkannada.in): ರಾಘವೇಂದ್ರ ರಾಜ್ ಕುಮಾರ್ ಈಗ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ !
ಆದರೆ ರಿಯಲ್ ಆಗಿ ಅಲ್ಲ, ರೀಲ್ ನಲ್ಲಿ! ಹೌದು. ರಾಘಣ್ಣ ಹೊಸ ಸಿನಿಮಾ ಒಪ್ಪಿಕೊಂಡಿದ್ದು, ಈ ಸಿನಿಮಾದಲ್ಲಿ ಪಕ್ಕಾ ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ.
ವಾರ್ಡ್ ನಂ.11 ಎಂಬ ಸಿನಿಮಾದಲ್ಲಿ ರಾಜಕಾರಣಿಯ ಪಾತ್ರ ಮಾಡುತ್ತಿದ್ದಾರೆ ರಾಘಣ್ಣ.
ಇದು ರಾಜಕಾರಣಿಯೊಬ್ಬರ ಸುತ್ತ ನಡೆಯುವ ಥ್ರಿಲ್ಲರ್ ಕತೆಯಂತೆ. ರಕ್ಷಿತ್ ಈ ಸಿನಿಮಾದ ನಾಯಕರು. ಶ್ರೀಕಾಂತ್ ನಿರ್ದೇಶನ ಮಾಡುತ್ತಿದ್ದಾರೆ.