ಆರೋಗ್ಯ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸುವ ಕೃತಜ್ಞ ವಾಹನಕ್ಕೆ ನಟ ರಮೇಶ್ ಅರವಿಂದ್ ಚಾಲನೆ.

ಬೆಂಗಳೂರು, ಜುಲೈ,19,2021(www.justkannada.in):  ಪ್ರತಿಯೊಬ್ಬ ಕೋವಿಡ್ ವಾರಿಯರ್ಸ್‌ ಗಳಿಗೆ ಕೃತಜ್ಞತೆ ಸಲ್ಲಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಅವರ ಋಣ ಎಲ್ಲರ ಮೇಲೂ ಇದೆ ಎಂದು ನಟ ರಮೇಶ್ ಅರವಿಂದ್ ಹೇಳಿದರು.jk

ಕಾವೇರಿ ಆಸ್ಪತ್ರೆ ವತಿಯಿಂದ ಟೆನ್ನಿಸ್ ಅಸೋಸಿಯೇಷನ್‌ ನಲ್ಲಿ ಸೋಮವಾರ ಆಯೋಜಿಸಿದ್ದ ಪತ್ರಿಕಾಗೋಷ್ಠಿ ಹಾಗೂ ಕೃತಜ್ಞಾ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದ ನಟ ರಮೇಶ್ ಅರವಿಂದ್, ಕಳೆದ 2 ವರ್ಷದಿಂದ ವಿಶ್ವದಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ವಾರಿಯರ್ಸ್‌ ಗಳಿಂದ ಇಂದು ನಾವೆಲ್ಲಾ ಜೀವಿಸುತ್ತಿದ್ದೇವೆ. ತಾಯಿಯ ಋಣದಂತೆ ಕೋವಿಡ್ ವಾರಿಯರ್ಸ್‌‌ಗಳ ಋಣ ತೀರಿಸುವುದು ಅಸಾಧ್ಯ. ಕಾವೇರಿ ಆಸ್ಪತ್ರೆ ವತಿಯಿಂದ ಕೃತಜ್ಞಾ ಕಾರ್ಯಕ್ರಮದ ಭಾಗವಾಗಿ ನಗರದಲ್ಲಿರುವ ಎಲ್ಲಾ ಕೋವಿಡ್ ವಾರಿಯರ್ಸ್‌ ಗಳಿಗೆ ಕೃತಜ್ಞತೆ ಸಲ್ಲಿಸಿ ಪ್ರಶಸ್ತಿ ನೀಡುವ ಸಾರ್ಥಕ ಹೆಜ್ಜೆ ಇಟ್ಟಿರುವುದು ಶ್ಲಾಘನೀಯ ಎಂದರು.

ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ವಿಜಯ ಭಾಸ್ಕರನ್ ಮಾತನಾಡಿ, ಕೋವಿಡ್ ವಾರಿಯರ್ಸ್‌ ಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಕೃತಜ್ಞಾ ಕಾರ್ಯಕ್ರಮವನ್ನು ಜುಲೈ 31ರಂದು ಹಮ್ಮಿಕೊಂಡಿದ್ದೇವೆ. ಇದರ ಭಾಗವಾಗಿ ಇಂದಿನಿಂದ 5 ವಾಹನಗಳಲ್ಲಿ ನಗರದಲ್ಲಿರುವ 300ಕ್ಕೂ ಹೆಚ್ಚು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ತೆರಳಲಿರುವ ನಮ್ಮ ತಂಡವು ಕೋವಿಡ್ ವಾರಿಯರ್ಸ್ ಗಳನ್ನು ಅಲ್ಲಿಯೇ ಸನ್ಮಾನಿಸಿ ಪ್ರಶಸ್ತಿ ನೀಡಲಿದೆ. ಇದರ ಜೊತೆಗೆ ಕೋವಿಡ್ ಚಿಕಿತ್ಸೆಗಾಗಿ ಹೊಸ ಆವಿಷ್ಕಾರ ಮಾಡಿದ ಆಸ್ಪತ್ರೆಗಳಿಗೆ ವಿಶೇಷ ಕ್ಯಾಟಗರಿಯಲ್ಲಿ ಪಶಸ್ತಿ ನೀಡಲಿದ್ದೇವೆ ಎಂದು ಹೇಳಿದರು.

ಕೋವಿಡ್‌ನಿಂದ ಮೃತಪಟ್ಟ ವಾರಿಯರ್ಸ್ ಮಕ್ಕಳಿಗೆ ಶಿಕ್ಷಣ ಹಾಗೂ ಉದ್ಯೋಗದ ಭರವಸೆ:

ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ವಾರಿಯರ್ಸ್ ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶ  2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಹಾಗೂ ಪದವೀದರ ಮಕ್ಕಳಿಗೆ ಉದ್ಯೋಗ ಕೊಡಿಸಲು ಮುಂದಾಗಿದ್ದೇವೆ. ಸಂಬಂಧಪಟ್ಟ ಕುಟುಂಬಗಳು ನೋಂದಣಿ ಮಾಡಿಕೊಳ್ಳಬಹುದು ಎಂದರು.

5 ಕೃತಜ್ಞಾ ವಾಹನಗಳಿಗೆ ಚಾಲನೆ:

ಇಂದಿನಿಂದ 12 ದಿನಗಳ ಕಾಲ 5 ಕೃತಜ್ಞಾ ವಾಹನಗಳಲ್ಲಿ ತೆರಳಲಿರುವ ಕಾವೇರಿ ಆಸ್ಪತ್ರೆಯ ತಂಡವರು, 300 ಆಸ್ಪತ್ರೆಗಳಿಗೆ ತೆರಳಿ ಅಲ್ಲಿನ ಆರೋಗ್ಯ ಕಾರ್ಯಕರ್ತರಿಗೆ ಸನ್ಮಾನ ಮಾಡಲಿದ್ದಾರೆ. ಮೊದಲ ದಿನದಂದು ವಿಕ್ಟೋರಿಯಾ ಆಸ್ಪತ್ರೆಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಸನ್ಮಾನ ಮಾಡಿದರು. ಇಂದು ಆ ವಾಹನಗಳಿಗೆ ನಟ ರಮೇಶ್ ಅರವಿಂದ್ ಅವರು ಚಾಲನೆ ನೀಡಿದರು. ಈ ವೇಳೆ ಕಾವೇರಿ ಆಸ್ಪತ್ರೆ ನಿರ್ದೇಶಕ ಡಾ. ವಿಲ್ಫೆಂಡ್ ಸ್ಯಾಮ್ಸನ್ ಉಪಸ್ಥಿತರಿದ್ದರು.

ENGLISH SUMMARY…..

Actor Ramesh Aravind flags off ‘vehicles of gratitude’ to identify and felicitate health workers
Bengaluru, July 19, 2021 (www.justkannada.in): “It is the duty of every one of us to express our gratitude to every COVID warrior, we all are grateful to them,” opined veteran actor Ramesh Aravind.
He participated in a press meet organized by the Kaveri Hospital, held at the Tennis Association, on Monday. In his address after flagging off the ‘vehicles of gratitude,’ Ramesh Aravind said that the pandemic has created a health emergency across the world. “We are all alive today because of the efforts of the COVID warriors. Their service is like our mothers and we cannot repay their gratitude. I would like to take this opportunity to congratulate the Kaveri Hospital for its gesture of identifying and felicitating all the COVID warriors,” he added.
Speaking on the occasion, Kaveri Hospital Executive Director Vijayabhaskaran said, “We launched the ‘gratitude program’ on July 31, to offer our salutes to the COVID warriors. As a part of this 5 vehicles will visit more than 300 government and private hospitals across Bengaluru city and felicitate all the COVID warriors at their place. Awards will also be given to those hospitals that have been innovative in providing COVID treatment,” he informed.
On the occasion, he explained that the children of COVID warriors who died while duty will be provided financial help. “A sum of up to Rs. 2 lakh will be provided to the needy children as scholarship and we will assist the degree holders to find a suitable job. I request interested families to come forward and register the names,” he said.
Five vehicles were flagged off on the occasion. All these five vehicles will visit 300 hospitals across the city in the next 12 days and felicitate health warriors. Health personnel of the Victoria Hospital was felicitated on the first day under this program.
Dr. Vilfend Samson was present on the occasion.
Keywords: COVID/ warriors/ identification/ felicitation/ Kaveri Hospital/ Actor Ramesh Aravind/ flagged off/ gratitude vehicles

Key words: Actor -Ramesh Aravind – -vehicle – recognizing- health workers.