ನಟ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮುಂಬೈ,ಜನವರಿ,21,2025 (www.justkannada.in): ದರೋಡೆಕೋರರಿಂದ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಟ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ದರೋಡೆಕೋರನಿಂದ ನಟ ಸೈಫ್ ಅಲಿ ಖಾನ್  ಚಾಕು ದಾಳಿಗೆ ಒಳಗಾಗಿದ್ದರು. ಜನವರಿ 16 ರಂದು  ದರೋಡೆ ಮಾಡುವ ಉದ್ದೇಶದಿಂದ ನಟ ಸೈಫ್ ಅಲಿ ಖಾನ್ ಅವರ ನಿವಾಸಕ್ಕೆ ನುಗ್ಗಿದ್ದ ಕಳ್ಳ,  ಸೈಫ್ ಅಲಿ ಖಾನ್ ಗೆ ಚಾಕುವಿನಿಂದ ಇರಿದಿದ್ದನು.

ಗಂಭೀರವಾಗಿ ಗಾಯಗೊಂಡಿದ್ದ ವರ್ಷದ ಸೈಫ್ ಅಲಿ ಖಾನ್ ಅವರನ್ನು ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಬೆನ್ನುಮೂಳೆಯಲ್ಲಿ ಸಿಲುಕಿದ್ದ ಚೂಪಾದ ಚಾಕುವನ್ನು ಹೊರ ತೆಗೆದಿದ್ದು, ನಂತರ್ ಸೈಫ್ ಅಲಿ ಖಾನ್ ಅವರನ್ನ ಜನವರಿ 17 ರಂದು ಐಸಿಯುನಿಂದ ವಿಶೇಷ ಕೋಣೆಗೆ ಸ್ಥಳಾಂತರಿಸಲಾಗಿತ್ತು.

ಇದೀಗ ಐದು ದಿನಗಳ ನಂತರ ಸೈಫ್ ಅಲಿ ಖಾನ್ ಇಂದು ಲೀಲಾವತಿ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ.

Key words: Actor, Saif Ali Khan, discharged,  hospital