ಬೆಂಗಳೂರು,ಜನವರಿ,1,2024 (www.justkannada.in): ಕ್ಯಾನ್ಸರ್ ಹಿನ್ನೆಲೆಯಲ್ಲಿ ಇತ್ತೀಚಿಗೆ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಅಮೆರಿಕಾಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಟ ಶಿವರಾಜ್ ಕುಮಾರ್ ಅವರಿಗೆ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಕ್ಯಾನ್ಸರ್ ಅನ್ನು ಗೆದ್ದಿದ್ದಾರೆ.
ಇದೀಗ ಹೊಸ ವರ್ಷದಿನದಂದೇ ನಟ ಶಿವರಾಜ್ ಕುಮಾರ್ ಅವರು ಅಭಿಮಾನಿಗಳ ಜೊತೆ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ. ಅಪರೇಷನ್ ಬಳಿಕ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ನಟ ಶಿವಣ್ಣ, ಬೆಂಗಳೂರಿನಿಂದ ಹೊರಡುವಾಗ ನಾನು ಸ್ವಲ್ಪ ಎಮೋಶನಲ್ ಆಗಿದ್ದೆ ಭಯ ಎನ್ನುವುದು ಮನುಷ್ಯನಿಗೆ ಇರುತ್ತದೆ. ಭಯ ನೀಗಿಸುವ ಅಭಿಮಾನಿಗಳು ಸಹಕಲಾವಿದರು ಇದ್ದಾರೆ. ಕೆಲವರು ಸ್ನೇಹಿತರು ಸಂಬಂಧಿಕರು ಡಾಕ್ಟರ್ಸ್ ಇರುತ್ತಾರೆ. ಕಿಮೋ ತೆರಪಿಯಲ್ಲಿ 45 ಸಿನಿಮಾ ಶೂಟ್ ಮಾಡಿರುವುದು ಗೀತಾ ನಿವೇದಿತಾ ಯಾವಾಗಲೂ ನನ್ನ ಬೆಂಬಲವಾಗಿ ನಿಂತಿದ್ದಾರೆ. ಯಾರು ಗಾಬರಿ ಭಯಪಡಬೇಡಿ ಎಂದು ನಟ ಶಿವಣ್ಣ ತಿಳಿಸಿದ್ದಾರೆ.
ನನ್ನ ಅಭಿಮಾನಿಗಳ ಪ್ರಾರ್ಥನೆ ಫಲಿಸಿದೆ. ಅಪರೇನ್ ಸಕ್ಸಸ್ ಆಗಿದೆ ಕಿಡ್ನಿ ತೆಗೆದಿದ್ದಾರೆ ಅಂತಾ ಭಾವಿಸಿದ್ದಾರೆ . ಆದರೆ ಯುರೆನರಿ ಬ್ಲಾಡರ್ ಮಾತ್ರ ತೆಗೆದಿದ್ದಾರೆ . ಮಾರ್ಚ್ ನಂತರ ಶೂಟಿಂಗ್ ಗೆ ಹೋಗುತ್ತೇನೆ. ಡ್ಯಾನ್ಸ್ ಫೈಟ್ ಲುಕ್ ಯಾವುದರಲ್ಲೂ ರಾಜಿ ಇಲ್ಲ. ಹಳೇ ಶಿವಣ್ಣ ಮತ್ತೆ ನಿಮ್ಮ ಮುಂದೆ ಬರುತ್ತಾನೆ ಎಂದು ವಿಡಿಯೋ ಮಾಡಿ ಶಿವಣ್ಣ ಸಂತಸ ಹಂಚಿಕೊಂಡಿದ್ದಾರೆ.
Key words: Actor, Shivanna, good news , fans, New Year