ಬೆಂಗಳೂರು, ಜನವರಿ 03, 2019 (www.justkannada.in): ನಟ ಶಿವರಾಜ್ ಕುಮಾರ್ ಅಭಿನಯದ ಹೊಸ ಚಿತ್ರವೊಂದು ಹೊಸ ವರ್ಷದ ದಿನ ಘೋಷಣೆಯಾಗಿದೆ.
ಈ ವರ್ಷ ಶಿವಣ್ಣ ಭಜರಂಗಿ 2, ದ್ರೋಣ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಾದ ಬಳಿಕ ಈಗ ಹೊಸ ಸಿನಿಮಾ ಘೋಷಣೆಯಾಗಿದ್ದು, ಇದು ಶಿವಣ್ಣನ 123 ನೇ ಸಿನಿಮಾವಾಗಲಿದೆ.
ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ರವಿ ಅರಸು ನಿರ್ದೇಶಿಸಲಿದ್ದಾರೆ. ತಮಿಳು ನಿರ್ಮಾಣ ಸಂಸ್ಥೆ ಸತ್ಯ ಜ್ಯೋತಿ ಫಿಲಂಸ್ ಇದಕ್ಕೆ ಹೂಡಿಕೆ ಮಾಡುತ್ತಿದೆ. ಫೆಬ್ರವರಿಯಲ್ಲಿ ಸಿನಿಮಾಗೆ ಚಾಲನೆ ಸಿಗಲಿದೆ.
ಮೂಲಗಳ ಪ್ರಕಾರ ಈ ಸಿನಿಮಾಗೆ ಟೈಟಲ್ ಫಿಕ್ಸ್ ಆಗಿದ್ದು, ಇದಕ್ಕೆ ‘ಆರ್ ಡಿಎಕ್ಸ್’ ಎನ್ನುವ ಹೆಸರಿಡುವ ಚಿಂತನೆ ನಡೆದಿದೆಯಂತೆ. ಇದು ಇನ್ನೂ ಫೈನಲ್ ಆಗಿಲ್ಲ.