ನಟ ಶಿವರಾಜ್ ಕುಮಾರ್ ಆರೋಗ್ಯ ಸುಧಾರಣೆ: ವಾಪಸ್ ಭಾರತಕ್ಕೆ ಬರೋದು ಯಾವಾಗ?

ಮೈಸೂರು,ಡಿಸೆಂಬರ್,28,2024 (www.justkannada.in):  ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಅಮೆರಿಕದಲ್ಲಿ ಯಶಸ್ವಿಯಾಗಿ ನಡೆದಿದ್ದು ಅವರ ಆರೋಗ್ಯ ಸುಧಾರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಕುರಿತು ಮೈಸೂರಿನಲ್ಲಿ ಮಾತನಾಡಿ ಮಾಹಿತಿ ನೀಡಿರುವ ನಟ ಶಿವರಾಜ್ ಕುಮಾರ್ ಅವರ ಬಾಮೈದ ಗೋವಿಂದರಾಜ್,  ಶಿವಣ್ಣನ ಆರೋಗ್ಯ ಚೆನ್ನಾಗಿದೆ. ನಾವೇ ಕರೆ ಮಾಡಿ ಮಾತನಾಡಿದ್ದೇವೆ. ಅಪರೇಷನ್ ಯಶಸ್ವಿಯಾಗಿದೆ. ಈಗ ಅಮೇರಿಕಾದಲ್ಲಿ ರೆಸ್ಟ್ ಮಾಡುತ್ತಿದ್ದಾರೆ. ಒಂದು ತಿಂಗಳ ವಿಶ್ರಾಂತಿ ಬಳಿಕ ಭಾರತಕ್ಕೆ ಬರುತ್ತಾರೆ. ಶಿವರಾಜ್ ಕುಮಾರ್ ಹುಷಾರಾಗಿದ್ದಾರೆ ಯಾವುದೇ ಆತಂಕವಿಲ್ಲ ಎಂದಿದ್ದಾರೆ.

ನಟ ಶಿವಣ್ಣ ತಂಗಿ ಲಕ್ಷ್ಮೀ  ಮಾತನಾಡಿ, ನಮಗೆಮೊದಲು ಆತಂಕವಿತ್ತು. ಶಿವಣ್ಣ ಆರೋಗ್ಯ ಚೆನ್ನಾಗಿತ್ತು. ಇದ್ದಕ್ಕಿದ್ದಂತೆ ಅನಾರೋಗ್ಯ ವಿಚಾರ ತಿಳಿದಾಗ ಬೇಸರವಾಯಿತು. ಎಲ್ಲರಿಗಿಂತ ಲವಲವಕೆಯಿಂದ ಇದ್ದಿದ್ದು ಶಿವಣ್ಣ.  ನನ್ನನ್ನ ಶಿವಣ್ಣ ಅಕ್ಕ ಅಂತಾರೆ. ಆದರೆ ನಾನು ಶಿವಣ್ಣನ ತಂಗಿ. ದೇವರ ದಯೆ ಎಲ್ಲರ ಆಶೀರ್ವಾದ ಶಿವಣ್ಣ ಆರೋಗ್ಯ ಸುಧಾರಣೆ ಆಗಿದೆ. ಭಾರತಕ್ಕೆ ಬಂದ ಬಳಿಕ ಮೈಸೂರಿಗೆ ಬಂದು ಯೋಗಾನರಸಿಂಹಸ್ವಾಮಿ ದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು.

Key words: Actor, Shivarajkumar, health, good