ಬೆಂಗಳೂರು, ಫೆಬ್ರವರಿ, 6,2025 (www.justkannada.in): ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನ ನಟ ಕಿಚ್ಚ ಸುದೀಪ್ ಅವರು ಇಂದು ಭೇಟಿಯಾಗಿದ್ದಾರೆ.
ಸದಾಶಿವ ನಗರದ ನಿವಾಸಕ್ಕೆ ನಟ ಕಿಚ್ಚ ಸುದೀಪ್ ಆಗಮಿಸಿ ಡಿಸಿಎಂ ಡಿಕೆ ಶಿವಕುಮಾರ್ ಅವರನ್ನ ಭೇಟಿಯಾಗಿದ್ದಾರೆ. ನಿರ್ದೇಶಕ ಅನೂಪ್ ಬಂಡಾರಿ ಸಹ ಭೇಟಿ ನೀಡಿದ್ದಾರೆ.
ಈ ಮಧ್ಯೆ ಇತ್ತೀಚೆಗೆ ನಟ ಕಿಚ್ಚ ಸುದೀಪ್ ಅವರು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆದಿದೆ ಎನ್ನುವ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಟ ಸುದೀಪ್ ಮನೆಗೆ ಮತ್ತಷ್ಟು ಕುತೂಹಲವನ್ನುಂಟು ಮಾಡಿದೆ.
ಫೆಬ್ರವರಿ 8 ರಿಂದ ಬೆಂಗಳೂರಿನಲ್ಲಿ ಸಿಸಿಎಲ್ ಆರಂಭ ಆಗಲಿದೆ. ಇದರ ಉದ್ಘಾಟನೆಗೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ ಕೆ ಶಿವಕುಮಾರ್ ಅವರಿಗೆ ಸುದೀಪ್ ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ.
Key words: Actor, Kiccha Sudeep, visits, DCM, DK Shivakumar, house