ಬೆಂಗಳೂರು, ಆಗಸ್ಟ್ 28, 2019 (www.justkannada.in): ಈ ಬಾರಿ ಸಾಹಸ ಸಿಂಹ ವಿಷ್ಣುವರ್ಧನ್ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.
ಸೆಪ್ಟೆಂಬರ್ 18 ರಂದು ವಿಷ್ಣುವರ್ಧನ್ ಜನ್ಮದಿನವಾಗಿದ್ದು, ಅದೇ ದಿನ ಅವರ ‘ನಿಷ್ಕರ್ಷ’ ಸಿನಿಮಾ ಮರು ಬಿಡುಗಡೆಯಾಗುತ್ತಿದೆ.
ಈ ಸಿನಿಮಾ ಸುನಿಲ್ ಕುಮಾರ್ ದೇಸಾಯಿಯವರ ನಿರ್ದೇಶನದಲ್ಲಿ ಮೂಡಿಬಂದಿದ್ದು, ಇಂದಿಗೂ ವಿಷ್ಣುವರ್ಧನ್ ಹಿಟ್ ಸಿನಿಮಾಗಳ ಪೈಕಿ ಒಂದು.