ಮಂಡ್ಯ,ನವೆಂಬರ್,16,2020(www.justkannada.in) : ಅಂಬರೀಶ್ ಅವರ 2ನೇ ವರ್ಷದ ಪುಣ್ಯ ಸ್ಮರಣೆ ನವೆಂಬರ್ 24ಕ್ಕೆ. ಹೀಗಾಗಿ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ನೆನಪಿನಲ್ಲಿ ಗುಡಿಯೊಂದನ್ನು ಕಟ್ಟಿದ್ದಾರೆ.
ಜಿಲ್ಲೆಯ ಮದ್ದೂರು ತಾಲೂಕಿನ ಹೊಟ್ಟೆಗೌಡನ ದೊಡ್ಡಿ ಗ್ರಾಮದಲ್ಲಿ ಅಭಿಮಾನಿಗಳಿಂದ ಗುಡಿ ನಿರ್ಮಾಣ ಮಾಡಲಾಗಿದೆ. ಗುಡಿಯಲ್ಲಿ ಅಂಬರೀಶ್ ಅವರ ಕಂಚಿನ ಪುತ್ಥಳಿ ನಿರ್ಮಾಣ ಮಾಡಿದ್ದಾರೆ.
8 ಲಕ್ಷ ರೂ.ಗಳ ವೆಚ್ಚದಲ್ಲಿ ಗುಡಿ ನಿರ್ಮಾಣ
ಈ ಗುಡಿಯನ್ನು ಸುಮಾರು 8 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ಮುನ್ನ ಅಂಬರೀಶ್ ಚಿತಾಭಸ್ಮವನ್ನು ಅಭಿಮಾನಿಗಳು ಪುತ್ಥಳಿ ನಿರ್ಮಾಣ ಸ್ಥಳದಲ್ಲಿ ಹಾಕಿದ್ದಾರೆ.
ನ.24 ರಂದು ಅಂಬಿ ಪುತ್ಥಳಿಯನ್ನು ಸಂಸದೆ ಸುಮಲತಾ ಅಂಬರೀಶ್ ಅನಾವರಣ
ಚಿತಾಭಸ್ಮವನ್ನ ತಂದು ಒಂದು ವರ್ಷದ ಕಾಲ ಪೂಜಿಸಿ ನಂತರ ಪುತ್ಥಳಿ ನಿರ್ಮಾಣದ ಸ್ಥಳದಲ್ಲಿ ಅಭಿಮಾನಿಗಳು ಹಾಕಿದ್ದಾರೆ. ಇದೇ ತಿಂಗಳ 24 ರಂದು ಅಂಬಿ ಪುತ್ಥಳಿಯನ್ನು ಅವರ ಪತ್ನಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅನಾವರಣ ಮಾಡಲಿದ್ದಾರೆ.
ಅಂಬರೀಶ್ ಬದುಕಿದ್ದಾಗ ಅವರ ಹುಟ್ಟುಹಬ್ಬವನ್ನ ತಮ್ಮದೇ ಗ್ರಾಮದ ಹಬ್ಬ ಎಂಬಂತೆ ಅಭಿಮಾನಿಗಳು ಆಚರಣೆ ಮಾಡುತ್ತಿದ್ದರು. ಈಗ ಅವರ ನೆನಪಿನಲ್ಲಿ ಗುಡಿ ನಿರ್ಮಿಸಿ ಅಂಬಿಯನ್ನ ಪೂಜಿಸಲು ಅಭಿಮಾನಿಗಳು ಮುಂದಾಗಿದ್ದಾರೆ.
key words : Actor-Ambarish’s-Best-Memory-Year-fans-Temple -construction