ಮೈಸೂರು,ಅಕ್ಟೋಬರ್,23,2020(www.justkannada.in) : ನಟ ಧನ್ವೀರ್ ನೆನ್ನೆ ಬಂಡೀಪುರದಲ್ಲಿ ಸಫಾರಿ ನಡೆಸಿದ್ದು, ಈ ಸಂದರ್ಭ ಹುಲಿ ನೋಡಿದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ರಾತ್ರಿ ಸಫಾರಿ ನಡೆಸುವುದು ಕಾನೂನು ಬಾಹಿರವಾಗಿದ್ದು, ನಟನ ಈ ಪೋಸ್ಟ್ ಗೆ ಭಾರಿ ವಿರೋಧವ್ಯಕ್ತವಾಗಿದೆ.
ಧನ್ವೀರ್ ಸಫಾರಿ ಮಾಡಿರುವ ವಿಡಿಯೋ ವೈರಲ್ ಆಗಿದ್ದು, ರಾತ್ರಿ ವೇಳೆ ಸಫಾರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸಫಾರಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಧನ್ವೀರ್ ಫೋಸ್ಟ್ ಗೆ ರಾತ್ರಿ ಸಫಾರಿ ನಡೆಸಿರುವುದು ಕಾನೂನು ಬಾಹಿರವೆಂದು ಅನೇಕರು ಆಕ್ರೋಶವ್ಯಕ್ತಪಡಿಸಿದ್ದಾರೆ.
ಸಿನಿಮಾ ನಟನಿಗೆ ಬಂಡೀಪುರದಲ್ಲಿ ರಾತ್ರಿ ಸಫಾರಿ ನಡೆಸಲು ಅನುಮತಿ ನೀಡಲಾಗಿದೆ. ಹಾಗಾದರೆ ಜನಸಾಮಾನ್ಯರಿಗೊಂದು ನ್ಯಾಯ, ಸಲೆಬ್ರಿಟಿಗಳಿಗೊಂದು ನ್ಯಾಯಾವೇ? ಜನಸಾಮಾನ್ಯರು ಅರಣ್ಯ ಪ್ರದೇಶದಲ್ಲಿ ಹಾದು ಹೋಗುವಾಗ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ದಂಡ ಹಾಕುತ್ತಾರೆ. ಆದರೆ, ಸೆಲೆಬ್ರಿಟಿಗಳಿಗೆ ಮಾತ್ರ ರೆಡ್ ಕಾರ್ಪೆಡ್ ಹಾಕಿ ಸಫಾರಿ ನಡೆಸಲಾಗುತ್ತಿದೆ ಎಂಬಿತ್ಯಾದಿಯಾಗಿ ಟೀಕೆಗಳು ವ್ಯಕ್ತವಾಗಿವೆ.
ಆಕ್ರೋಶ ಹೆಚ್ಚಾಗುತ್ತಿದ್ದಂತೆ ಧನ್ವೀರ್ ತಮ್ಮ ಸಫಾರಿ ವಿಡಿಯೋ ಡಿಲೀಟ್
ಸೆಲೆಬ್ರಿಟಿಗಳಿಗಾಗಿ ಇಷ್ಟ ಬಂದಂತೆ ರಾತ್ರಿ ವೇಳೆ ಸಫಾರಿ ನಡಸುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಗಳ ಮೇಲೂ ಅನೇಕರು ಕಿಡಿಕಾರಿದ್ದು. ನಟನ ವಿಡಿಯೋ ಬಗ್ಗೆ ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಧನ್ವೀರ್ ತಮ್ಮ ಸಫಾರಿ ವಿಡಿಯೋವನ್ನು ಡಿಲೀಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ನಟ ಧನ್ವೀರ್ ಸ್ಪಷ್ಟನೆ ನೀಡಿದ್ದು, ಅರಣ್ಯ ಇಲಾಖೆಯ ಸಂಜೆ 4.30 ರಿಂದ 6.30ರಂದು ನಡೆಸುವ ಕೊನೆಯ ಸಫಾರಿಯಾಗಿದೆ. ಕಾಡಾಗಿರುವುದರಿಂದ ಕತ್ತಲು ದಟ್ಟವಾಗಿ ಕಾಣುತ್ತಿದೆ. ರಾತ್ರಿ ಸಫಾರಿ ಮಾಡಿಲ್ಲ ಎಂದು ಹೇಳಿದ್ದಾರೆ.
key words : Actor-Dhanveer-Safari-Social-video-Widespread-outrage-website