ಮುಂಬೈ:ಮೇ-13:(www.justkannada.in) ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ(Sustainable Development Goals) ಅಭಿಯಾನಕ್ಕೆ ಬಾಲಿವುಡ್ ನಟಿ ದಿಯಾ ಮಿರ್ಜಾ ಸೇರಿದಂತೆ 17 ಜನ ಖ್ಯಾತನಾಮರು ರಾಯಭಾರಿಗಳಾಗಿ ಆಯ್ಕೆಯಾಗಿದ್ದಾರೆ.
ವಿಶ್ವಸಂಸ್ಥೆ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ಅವರು ಎಸ್ ಡಿಜಿ ರಾಯಭಾರಿಗಳ ನೇಮಕ ಆದೇಶಕ್ಕೆ ಸಹಿ ಹಾಕಿದ್ದಾರೆ ಎಂದು ವಿಶ್ವಸಂಸ್ಥೆಯ ವಕ್ತಾರ ಕಚೇರಿ ತಿಳಿಸಿದೆ. ನಟಿ ದಿಯಾ ಮಿರ್ಜಾ, ಇ-ಕಾಮರ್ಸ್ ಕ್ಷೇತ್ರದ ಅಲಿಬಾಬಾ ಸಂಸ್ಥೆಯ ಮುಖ್ಯಸ್ಥ ಜಾಕ್ ಮಾ ಪೆಂಗ್ ಲೀ, ಬ್ರಿಟಿಷ್ ನಟ ರಿಚರ್ಡ್ ಕರ್ಟಿಸ್ ಸೇರಿದಂತೆ, 17 ಖ್ಯಾತನಾಮರು ವಿಶ್ವಸಂಸ್ಥೆಯ ಈ ಅಭಿಯಾನಕ್ಕೆ ರಾಯಭಾರಿಗಳಾಗಿದ್ದಾರೆ.
ಜಾಗತಿಕ ಹವಾಮಾನ ಬದಲಾವಣೆ ನಿಯಂತ್ರಣ ಕುರಿತು ಪ್ಯಾರಿಸ್ ಒಪ್ಪಂದದಲ್ಲಿ ಸುಸ್ಥಿರ ಅಭಿವೃದ್ಧಿಗೆ ನಿಗದಿಪಡಿಸಿರುವ ಗುರಿಗಳ ಸಾಧನೆಗೆ ರಾಷ್ಟ್ರಗಳನ್ನು ಪ್ರೇರೇಪಿಸುವುದು ಅಭಿಯಾನದ ಉದ್ದೇಶವಾಗಿದೆ.
ಈ ಕುರಿತು ದಿಯಾ ಮಿರ್ಜಾ ತಮ್ಮ ಸಂತಸ ಹಂಚಿಕೊಂಡಿದ್ದು, ವಿಶ್ವಸಂಸ್ಥೆಯು ನನಗೆ ನೀಡಿರುವ ಅಭೂತಪೂರ್ವ ಗೌರವಕ್ಕೆ ನಾನು ಅಭಾರಿಯಾಗಿದ್ದೇನೆ. ವಿಶ್ವಸಂಸ್ಥೆಯ ಬಹು ಮಹತ್ವಾಕಾಂಕ್ಷೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯ ಈ ಅಭಿಯಾನಕ್ಕೆ ನಾನು ಸೂಕ್ತ ನ್ಯಾಯ ಒದಗಿಸಲಿದ್ದೇನೆ ಎಂದಿದ್ದಾರೆ. ಅಲ್ಲದೇ ತಾವು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆ ರಾಯಭಾರಿ ಜವಾಬ್ದಾರಿಯನ್ನಯ ಹೊರಲು ಸಜ್ಜಾಗಿರುವುದಾಗಿ ತಿಳಿಸಿದ್ದಾರೆ.
ಯುಎನ್ ಎಸ್ ಡಿಜಿ ಅಭಿಯಾನ ರಾಯಭಾರಿಗಳಾಗಿ ಬಾಲಿವುಡ್ ನಟಿ ದಿಯಾ ಮಿರ್ಜಾ ಸೇರಿ 17 ಜನ ನೇಮಕ
Actress Dia Mirza, Alibaba chief among 17 new ‘SDG Advocates’ of UN
Actor Dia Mirza and Alibaba chief Jack Ma are among 17 global figures appointed by UN Secretary-General Antonio Guterres as advocates to drive action and solidify global political will for Sustainable Development Goals