ಬೆಂಗಳೂರು, ಜೂನ್ 05, 2021 (www.justkannada.in): ನಟಿ ಜೂಹಿ ಚಾವ್ಲಾ ದೆಹಲಿ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದರು.
ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, “ನಿಮ್ಮ ಪ್ರಚಾರಕ್ಕಾಗಿ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಬೇಡಿ, ಕಾನೂನು ಪ್ರಕ್ರಿಯೆಗಳನ್ನು ದುರುಪಯೋಗ ಪಡಿಸಿಕೊಳ್ಳಬೇಡಿ” ಎಂದು ಛೀಮಾರಿ ಹಾಕಿದೆ.
ಕೋರ್ಟ್ ಸಮಯ ವ್ಯರ್ಥ ಮಾಡಿದ್ದಕ್ಕಾಗಿ 20 ಲಕ್ಷ ರೂಪಾಯಿಗಳನ್ನು ದಂಡ ವಿಧಿಸುವ ಮೂಲಕ ಬಾಲಿವುಡ್ ನಟಿಗೆ ಆಘಾತ ನೀಡಿದೆ.
5 ಜಿ ತಂತ್ರಜ್ಞಾನದಿಂದಾಗಿ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಭೂಮಿಯ ಮೇಲಿರುವ ಸಸ್ಯ ಸಂಕುಲ ಇದರಿಂದ ಹೊರ ಸೂಸುವ ವಿಕಿರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಬಗ್ಗೆ ಕ್ರಮ ವಹಿಸಬೇಕು ಎಂದು ಜೂಹಿ ಕೋರಿದ್ದರು.