‘ಜಯಲಲಿತಾ’ಗಾಗಿ ತಮಿಳು ಕಲಿಯುತ್ತಿರುವ ಕಂಗನಾ: ಮೈಸೂರಿನಲ್ಲಿ ಮೊದಲ ಭಾಗದ ಚಿತ್ರೀಕರಣ

ಬೆಂಗಳೂರು, ಜುಲೈ 30, 2019 (www.justkannada.in): ಜಯಲಲಿತಾ ಜೀವನಾಧಾರಿತ ಚಿತ್ರದಲ್ಲಿ ಕಂಗನಾ, ಜಯಲಲಿತಾ ಪಾತ್ರ ನಿರ್ವಹಿಸುತ್ತಿದ್ದಾರೆ. ಇದಕ್ಕಾಗಿ ತಮಿಳು ಭಾಷೆಯನ್ನು ಕಲಿಯುತ್ತಿದ್ದಾರಂತೆ.

ನಿರ್ದೇಶಕರು ಹಾಗೂ ತಂಡ ಚಿತ್ರದ ಆರಂಭದ ಕೆಲಸದಲ್ಲಿ ತೊಡಗಿದೆ. ಸೆಪ್ಟೆಂಬರ್‌ ತಿಂಗಳ ಅಂತ್ಯದಲ್ಲಿ ಈ ಚಿತ್ರದ ಚಿತ್ರೀಕರಣವನ್ನು ಆರಂಭಿಸಲು ಈ ಚಿತ್ರದ ನಿರ್ದೇಶಕ ಎ.ಎಲ್‌ ವಿಜಯ್‌ ಯೋಜನೆ ಹಾಕಿಕೊಂಡಿದ್ದಾರೆ.

ಇದು ಮೂರು ಭಾಷೆಗಳಲ್ಲಿ ತಯಾರಾಗಲಿದ್ದು, ಹಿಂದಿಯಲ್ಲಿ ‘ಜಯ’ ಎಂದು ತೆಲುಗು ಹಾಗೂ ತಮಿಳಿನಲ್ಲಿ ‘ತಲೈವಿ’ ಎಂದು ಬಿಡುಗಡೆಯಾಗಲಿದೆ.  ಚಿತ್ರದ ಮೊದಲ ಭಾಗದ ಚಿತ್ರೀಕರಣವು ಮೈಸೂರಿನಲ್ಲಿ ನಡೆಯಲಿದ್ದು, ಬಳಿಕ ಚೆನ್ನೈ ಹಾಗೂ ಮುಂಬೈನಲ್ಲಿ ನಡೆಯಲಿದೆ.