ಬೆಂಗಳೂರು, ಮೇ 29, 2020 (www.justkannada.in): ಬಹುಭಾಷಾ ನಟಿ ಪೂಜಾ ಹೆಗ್ಡೆ ಇನ್ ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಲಾಗಿದೆಯಂತೆ!
ಈ ವಿಷಯವನ್ನು ಸ್ವತಃ ಪೂಜಾ ಹೆಗ್ಡೆ ಹೇಳಿಕೊಂಡಿದ್ದಾರೆ. ‘ನನ್ನ ಇನ್ ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಮಾಡಲಾಗಿದೆ ಎಂದು ಸ್ವತಃ ಬಹುಭಾಷಾ ನಟಿ ಹಾಗೂ ಕನ್ನಡತಿ ಪೂಜಾ ಹೆಗ್ಡೆ ಟ್ವೀಟರ್ ನಲ್ಲಿ ಹೇಳಿಕೊಂಡಿದ್ದಾರೆ.
ಸುಮಂತಾ ರುತ್ ವಿರುದ್ಧ ಕೀಟಲೆ ಮಾಡಿ ಪೂಜಾ ಹೆಗ್ಡೆ ಅಕೌಂಟ್ ನಲ್ಲಿ ಪೋಸ್ಟ್ ಗಳನ್ನು ಹಾಕಲಾಗಿತ್ತು. ಇದು ವಿವಾದಕ್ಕೆ ತಿರುಗುವ ಮುನ್ನವೇ ಸ್ಪಷ್ಟನೆ ನೀಡಿರುವ ಪೂಜಾ ಹೆಗ್ಡೆ, ನನ್ನ ಇನ್ ಸ್ಟಾಗ್ರಾಂ ಅಕೌಂಟ್ ಹ್ಯಾಕ್ ಆಗಿದೆ. ಹಾಗಾಗಿ ಯಾರೂ ವೈಯಕ್ತಿಕವಾಗಿ ಟೀಕೆ, ಪೋಸ್ಟ್ ಬಂದರೆ ಕಡೆಗಣಿಸಿ. ಈ ಸಮಸ್ಯೆಯನ್ನು ಪರಿಹರಿಸಲು ನನ್ನ ಐಟಿ ತಂಡ ಪ್ರಯತ್ನ ನಡೆಸಿದೆ ಎಂದು ಟ್ವೀಟರ್ ನಲ್ಲಿ ವಿವರಿಸಿದ್ದಾರೆ.