ಬೆಂಗಳೂರು, ಜೂನ್ 02, 2021 (www.justkannada.in): ನಟಿ ಪ್ರಣಿತಾ ಸುಭಾಷ್ ಉದ್ಯಮಿ ನಿತಿನ್ ರಾಜು ಅವರೊಂದಿಗೆ ಸಪ್ತಪದಿ ತುಳಿದಿದ್ದಾರೆ.
ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮದುವೆ ತುಂಬಾ ಸರಳವಾಗಿ ನಡೆದಿದೆ. ವಿವಾಹ ಸಮಾರಂಭದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಈ ವಿಷಯವನ್ನು ಪ್ರಣಿತಾ ಹಂಚಿಕೊಂಡಿದ್ದಾರೆ.
ಮೂಲತಃ ಬೆಂಗಳೂರು ನಿವಾಸಿಯಾಗಿರುವ ಪ್ರಣಿತಾ ಪತಿ ನಿತಿನ್, ಮಾಲ್ವೊಂದರ ಮಾಲೀಕರೂ ಆಗಿದ್ದು ಉದ್ಯಮಿಯಾಗಿದ್ದಾರೆ.
ಕೊರೊನಾ ಮಾರ್ಗಸೂಚಿ ಹಿನ್ನೆಲೆಯಲ್ಲಿ ಅತ್ಯಾಪ್ತರ ಸಮ್ಮುಖದಲ್ಲಿ ಸರಳವಾಗಿ ಪ್ರಣಿತಾ ಮದುವೆ ನಡೆದಿದೆ ಎಂಬ ಮಾಹಿತಿ ಲಭಿಸಿದೆ.