ಬೆಂಗಳೂರು, ಅಕ್ಟೋಬರ್ 01, 2022 (www.justkannada.in): ನಟಿ ಪ್ರಿಯಾಂಕಾ ಚೋಪ್ರಾ, ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸಂದರ್ಶನ ಮಾಡಿದ್ದಾರೆ.
ಈ ವಿಶೇಷ ಸಂವಾದದ ಫೋಟೋಗಳನ್ನು ಪ್ರಿಯಾಂಕಾ ಚೋಪ್ರಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯರ ಹಕ್ಕುಗಳಿಗಾಗಿನ ಈ ವಿಶೇಷ ಸಭೆಯಲ್ಲಿ ಪ್ರಿಯಾಂಕಾ ಚೋಪ್ರಾ ಗರ್ಭಪಾತದ ಕಾನೂನಿನ ಅಗತ್ಯತೆ ಬಗ್ಗೆ ಮಾತನಾಡಿದ್ದಾರೆ.
ಶ್ವೇತಭವನಕ್ಕೆ ಭೇಟಿ ನೀಡಿದ ಪ್ರಿಯಾಂಕ, ಸಂದರ್ಶನ ವೇಳೆ ಗರ್ಭಪಾತ ಕಾನೂನುಗಳು, ವೇತನ ಸಮಾನತೆ ಬಗ್ಗೆ ಹ್ಯಾರಿಸ್ ಅವರೊಂದಿಗೆ ಚರ್ಚಿಸಿದ್ದಾರೆ.
ಈ ವೇಳೆ ಮಾತನಾಡಿದ ಪ್ರಿಯಾಂಕ, 22 ವರ್ಷಗಳ ವೃತ್ತಿಜೀವನದಲ್ಲಿ ಈ ವರ್ಷ ನಾನು ಮೊದಲ ಬಾರಿಗೆ ಪುರುಷ ಸಹ-ನಟನೊಂದಿಗಿನ ಕೆಲಸದಲ್ಲಿ ಸಮಾನ ವೇತನವನ್ನು ಪಡೆದಿದ್ದೇನೆ ಎಂದಿದ್ದಾರೆ.
ಕಮಲಾ ಹ್ಯಾರಿಸ್ ಮಾತನಾಡಿ, ಅಧಿಕಾರದಲ್ಲಿರುವ ಮಹಿಳಾ ಡೆಮೋಕ್ರಟ್ಗಳು ಸಂತಾನೋತ್ಪಾದನೆ ಹಕ್ಕುಗಳಿಗಾಗಿ ಹೋರಾಡುವ ಕರ್ತವ್ಯವನ್ನು ನೆನಪಿಸಿದ್ದಾರೆ.