ಬೆಂಗಳೂರು, ಆಗಸ್ಟ್ 27, 2021 (www.justkannada.in): ಶೋಷಣೆ ನಡೆದಾಗ ಮಹಿಳೆಯರದ್ದೇ ತಪ್ಪು ಎಂಬಂತೆ ವಾದ ಮಂಡಿಸುವವರಿಗೆ ನಟಿ ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಸುದೀರ್ಘವಾಗಿ ಬರೆದು ಪೋಸ್ಟ್ ಮಾಡಿದ್ದಾರೆ. ರಮ್ಯಾ ಮಾಡಿರುವ ಇನ್ಸ್ಟಾಗ್ರಾಮ್ ಪೋಸ್ಟ್ ವೈರಲ್ ಆಗುತ್ತಿದೆ.
ಮಹಿಳೆಯರ ವಿರುದ್ಧ ನಡೆಯುವ ಅಪರಾಧಗಳನ್ನು ನೋಡಿಕೊಂಡು ಸುಮ್ಮನಿರಬೇಡಿ. ಧ್ವನಿ ಎತ್ತಿ’ ಎಂದು ರಮ್ಯಾ ಕರೆ ನೀಡಿದ್ದಾರೆ.
ಶೋಷಣೆ ನಡೆದಾಗಲೆಲ್ಲ ಮಹಿಳೆಯರು ಸಡಿಲ ಆಗಿರುವಂತಹ ಬಟ್ಟೆ ಧರಿಸಬಾರದಿತ್ತು, ತುಂಬ ರಾತ್ರಿ ಸಮಯದಲ್ಲಿ ಹೊರಗೆ ಹೋಗಬಾರದಿತ್ತು, ಮೇಕಪ್ ಹಾಕಿಕೊಳ್ಳಬಾರದಿತ್ತು, ಕೆಂಪು ಲಿಪ್ಸ್ಟಿಕ್ ಯಾಕೆ? ಕಣ್ಣು ಮಿಟುಕಿಸಬಾರದಿತ್ತು ಎಂದೆಲ್ಲ ಹೇಳುತ್ತಾರೆ’ ಇದನ್ನು ಒಗ್ಗಟ್ಟಾಗಿ ಖಂಡಿಸಿ ಧ್ವನಿ ಎತ್ತಬೇಕಿದೆ ಎಂದು ರಮ್ಯಾ ಪೋಸ್ಟ್ ಮಾಡಿದ್ದಾರೆ.