ಬೆಂಗಳೂರು, ಜನವರಿ 02, 2021 (www.justkannada.in):
ಹೊಸ ವರ್ಷದಿಂದ ಮಾಂಸ ತಿನ್ನುವುದನ್ನು ತ್ಯಜಿಸಲಿದ್ದೇನೆ ಎಂದಿದ್ದಾರೆ ಮಾಜಿ ಸಂಸದೆ, ನಟಿ ರಮ್ಯಾ.
ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ರಮ್ಯಾ ಇತ್ತೀಚೆಗೆ ತುಂಬಾ ಆಯಕ್ಟಿವ್ ಆಗಿದ್ದಾರೆ. ಅಲ್ಲದೆ ಹೊಸ ಹೊಸ ವಿಷಯಗಳನ್ನು ಶೇರ್ ಮಾಡುತ್ತ ಅಭಿಮಾನಿಗಳಿಗೆ ಖುಷಿ ನೀಡುತ್ತಿದ್ದಾರೆ.
ಈ ಬಗ್ಗೆ ಸ್ವತಃ ಅವರೇ ಹೇಳಿಕೊಂಡಿದ್ದು, ವಿಡಿಯೋ ಒಂದನ್ನು ಶೇರ್ ಮಾಡುವ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ನಟಿ, ‘ಈ ವರ್ಷದ ಆರಂಭದಲ್ಲಿ ನಾನು ಸಸ್ಯಾಹಾರಿಯಾಗಿ ಬದಲಾಗಿದ್ದೇನೆ. ಇದು ನಾನು ತೆಗೆದುಕೊಂಡ ಉತ್ತಮ ನಿರ್ಧಾರ ಎಂದಿದ್ದಾರೆ.