ಬೆಂಗಳೂರು, ಫೆಬ್ರವರಿ 23, 2022 (www.justkannada.in): ಡಬಲ್ ಮೀನಿಂಗ್ ಪ್ರಶ್ನೆ ಕೇಳಿದ ವ್ಯಕ್ತಿಗೆ ಸಮಂತಾ ಸರಿಯಾದ ಉತ್ತರವೇ ಕೊಟ್ಟಿದ್ದಾರೆ.
ಸಮಂತಾರ ಉತ್ತರ ಕಂಡು ಎಲ್ಲರೂ ಸೂಪರ್ ಸಮಂತಾ ಇಂಥವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದೀರ ಎಂದು ಹೇಳಿದ್ದಾರೆ.
ಟ್ರೋಲ್ ಮಾದರಿಯ, ಅಸಭ್ಯ ಪ್ರಶ್ನೆ ಒಂದು ಸಮಂತಾಗೆ ಎದುರಾಗಿತ್ತು. ಸಮಂತಾಳನ್ನು ರಿಪ್ರೋಡ್ಯೂಸ್ ಮಾಡುವುದಾಗಿ ಪ್ರಶ್ನೆಯಲ್ಲಿ ಕೇಳಲಾಗಿತ್ತು. ಈ ಪ್ರಶ್ನೆಯನ್ನು ಸ್ವೀಕರಿಸಿದ ನಟಿ ಸಮಂತಾ ಖಾರವಾಗಿ ಉತ್ತರ ಕೊಟ್ಟು ಪಾಠ ಕಲಿಸಿದ್ದಾರೆ.
‘ನೀವು ರಿಪ್ರೋಡ್ಯೂಸ್ ಆಗಿದ್ದೀರಾ? ಏಕೆಂದರೆ ನಾನು ನಿನ್ನನ್ನು ರಿಪ್ರೋಡ್ಯೂಸ್ ಮಾಡಲು ಬಯಸುತ್ತೇನೆ’ ಎಂದು ಪ್ರಶ್ನೆ ಕೇಳಲಾಗಿದೆ. ಈ ಪ್ರಶ್ನೆಗೆ ಸಮಂತಾ ಸೂಪರ್ ಆಗಿಯೇ ಉತ್ತರ ಕೊಟ್ಟಿದ್ದಾರೆ. ‘ಒಂದು ವಾಕ್ಯದಲ್ಲಿ ರೀಪ್ರೊಡ್ಯೂಸ್ ಪದವನ್ನು ಹೇಗೆ ಬಳಸುವುದು. ಅದನ್ನು ಮೊದಲು ಗೂಗಲ್ ಮಾಡಬೇಕೇ? ಎಂದಿದ್ದಾರೆ.