ಬೆಂಗಳೂರು, ಸೆಪ್ಟೆಂಬರ್ 09, 2020 (www.justkannada.in): ಮಡಿವಾಳದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ಸಂಜನಾ ಮತ್ತು ರಾಗಿಣಿ ನಡುವೆ ಜಗಳ ನಡೆದಿದೆ.
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಜಾಲದ ನಂಟು ಪ್ರಕರಣದ ಸಂಬಂಧ ಕಸ್ಟಡಿಯಲ್ಲಿರುವ ಇಬ್ಬರಿಗೆ ಜಗಳ ನಡೆದಿದೆ.
ಇಬ್ಬರೂ ನಟಿಯರು ಒಂದೇ ರೂಮಿನಲ್ಲಿರಬೇಕಾದ ಜರೂರತ್ತು ಎದುರಾಗಿದೆ. ಆ ವೇಳೆ ರೂಮ್ನಲ್ಲಿ ಲೈಟ್ ಆಫ್ ಮಾಡುವ ವಿಚಾರಕ್ಕೆ ಇಬ್ಬರೂ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೈಟ್ ಆಫ್ ಮಾಡಿದ್ದಕ್ಕೆ ಮತ್ತೊಬ್ಬರು ಕ್ಯಾತೆ ತೆಗೆದಿದ್ದಾರೆ. ಅಗ ಇಬ್ಬರ ನಡುವೆ ವಾಕ್ಸಮರ ನಡೆದಿದೆ. ಈ ನಡುವೆ ರಾಗಿಣಿ ಮತ್ತು ಸಂಜನಾ ಕೊಠಡಿಯೊಳಗೆ ಮಹಿಳಾ ಪೊಲೀಸ್ ಸಿಬ್ಬಂದಿಯೂ ವಾಸ್ತವ್ಯ ಹೂಡಿದ್ದಾರೆ.