ಬೆಂಗಳೂರು, ಡಿಸೆಂಬರ್ 19, 2019 (ww.justkannada.in): ಹಿರಿಯ ನಟಿ ಶೃತಿ ಕಾರು ಚಾಲಕನಾಗಿದ್ದ ಮಂಜುನಾಥ್ ಸಿಂಗ್ (25) ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿರುವ ಘಟನೆ ಬೆಂಗಳೂರಿನ ಉತ್ತರ ತಾಲೂಕಿನ ಮಾಚೋನಹಳ್ಳಿ ಗ್ರಾಮದ ಬಳಿ ನಡೆದಿದೆ.
ಮಾಗಡಿ ರಸ್ತೆಯ ಫಾರೆಸ್ಟ್ ಗೇಟ್ ಸಮೀಪದಲ್ಲಿದ್ದ ಮರವೊಂದಕ್ಕೆ ನೇಣು ಹಾಕಿಕೊಂಡಿರುವ ಮಂಜುನಾಥ್ ಸಿಂಗ್ ನಟಿ ಶೃತಿ ಮತ್ತು ನಟ ಶರಣ್ಗೆ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದರು.
ಮಂಜುನಾಥ್ ಸಿಂಗ್ ಅವರು ರಾತ್ರಿ ಸ್ನೇಹಿತರೊಂದಿಗೆ ಕಡಬಗೆರೆಯಲ್ಲಿ ಪಾರ್ಟಿ ಮಾಡಿದ್ದರು ಎಂದು ತಿಳಿದು ಬಂದಿದೆ. ಮಂಜುನಾಥ್ ಸಾವಿನ ಬಗ್ಗೆ ಹಲವು ಅನುಮಾನ ಹುಟ್ಟಿಕೊಂಡಿದ್ದು ಸೂಕ್ತ ತನಿಖೆ ನಡೆಸಬೇಕು ಎಂದು ಮೃತನ ಕುಟುಂಬ ಆಗ್ರಹಿಸಿದೆ.