ಬೆಂಗಳೂರು, ಜನವರಿ 13, 2020 (www.justkannada.in): ನಟಿ ಶ್ರೀಲೀಲಾ ತೆಲುಗು ಸಿನಿಮಾದ ಆಫರ್ ಬಂದಿದ್ದು, ಅದಕ್ಕೆ ಈ ‘ಕಿಸ್’ ನಟಿ ಓಕೆ ಎಂದಿದ್ದಾರೆ.
ತೆಲುಗಿನಲ್ಲಿ ಪೆಲ್ಲಿಸಂದಡಿ ಸಿನಿಮಾಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. ಶ್ರೀಕಾಂತ್ ಪುತ್ರ ರೋಷನ್ ಶ್ರೀಕಾಂತ್ ಈ ಸಿನಿಮಾಗೆ ನಾಯಕರಾಗಿ ನಟಿಸಲಿದ್ದಾರೆ.
ಧ್ರುವ ಸರ್ಜಾ ಜೊತೆ ದುಬಾರಿ, ಧನ್ವೀರ್ ಗೌಡ ಜೊತೆ ಬೈ ಟು ಲವ್ ಸಿನಿಮಾದಲ್ಲಿ ಚಾನ್ಸ್ ಪಡೆದಿರುವ ಶ್ರೀಲೀಲಾ ತೆಲುಗೂ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ.
ಸದ್ಯದಲ್ಲೇ ಚಿತ್ರದ ಶೂಟಿಂಗ್ ನಲ್ಲಿ ಅಭಿಮಾನಿಗಳ ನೆಚ್ಚಿನ ಕ್ಯೂಟ್ ನಟಿ ಪಾಲ್ಗೊಳ‍್ಳಲಿದ್ದಾರೆ.