ಮೈಸೂರು,ಅಕ್ಟೋಬರ್,24,2020(www.justkannada.in) : ನಟಿ ಹರಿಪ್ರಿಯ ಶುಕ್ರವಾರ ಸಂಜೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.ಈ ಕುರಿತು ಶನಿವಾರ ತಮ್ಮ ಟ್ವಿಟರ್ ಖಾತೆಯಲ್ಲಿ ಸಂತಸ ಹಂಚಿಕೊಂಡಿರುವ ನಟಿ ಹರಿಪ್ರಿಯ, ನವರಾತ್ರಿ ಸಂದರ್ಭದಲ್ಲಿ ಚಾಮುಂಡೇಶ್ವರಿ ದೇವಿಯ ದರ್ಶನ ಮಾಡಿರುವುದಕ್ಕೆ ಸಂತೋಷವಾಗಿದೆ. ಹೃದಯ ಆಕಾರದ ಕಣ್ಣುಗಳಿಂದ ನಗುತ್ತಿರುವ ಮುಖ ದೇವಿ ನಮ್ಮೆಲ್ಲರನ್ನೂ ಆಶೀರ್ವದಿಸಲಿ, ನವರಾತ್ರಿ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಮೈಸೂರಿನಲ್ಲಿ ಪೆಟ್ರೊಮ್ಯಾಕ್ಷ್ ಶೂಟಿಂಗ್
ವಿಜಯ ಪ್ರಸಾದ್ ನಿರ್ದೇಶನದ ಪೆಟ್ರೊಮ್ಯಾಕ್ಷ್ ಚಿತ್ರದ ಶೂಟಿಂಗ್ ಹಿನ್ನೆಲೆಯಲ್ಲಿ ನಟಿ ಹರಿಪ್ರಿಯ ಮೈಸೂರಿನಲ್ಲಿದ್ದಾರೆ. ಹೀಗಾಗಿ, ಶುಕ್ರವಾರ ಚಾಮುಂಡಿಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
key words : Actress-Haripriya-visits-Chamundibetta-Share-photo-Twitter