ಮಂಡ್ಯ,ಜನವರಿ,10,2021(www.justkannada.in) : ನನಗೆ ಸಂಬಂಧಪಡದ ವಿಚಾರವನ್ನು ಕೇಳಬೇಡಿ. ಯಾರಪ್ಪ ಅದು?, ಅವರು ಯಾರು ಅಂತ ಗೊತ್ತಿಲ್ಲ. ಗೊತ್ತಿಲ್ಲದಿದ್ದವರ ಬಗ್ಗೆ ನಾನ್ಯಾಕೆ ತಲೆಕೆಡಿಸಿಕೊಳ್ಳಲಿ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶ್ರೀರಂಗಪಟ್ಟಣದ ನೇರಳಕೆರೆ ಗ್ರಾಮದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಸಿಸಿಬಿ ನೋಟಿಸ್ ಕುರಿತು ಮಾಧ್ಯಮದವರ ಪ್ರಶ್ನೆಗೆ ಈ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ನಾನು ರಾಜ್ಯ ಸರ್ಕಾರದ ಬಗ್ಗೆ ತಲೆ ಕೆಡಿಸಿಕೊಳ್ಳೋದಿಲ್ಲ. ನನ್ನ ಉದ್ದೇಶ ಇರೋದು ಎರಡೂವರೆ ವರ್ಷ ಸರ್ಕಾರದ ಅವಧಿ ಮುಕ್ತಾಯಗೊಂಡ ನಂತರ, ರಾಜ್ಯದಲ್ಲಿ ಜನತಾದಳ ಸರ್ಕಾರ ಅಸ್ಥಿತ್ವಕ್ಕೆ ತರೋದು ಎಂದಿದ್ದಾರೆ.

2023 ಕರ್ನಾಟಕದ ರಾಜ್ಯ ಜನತಾದಳದ ರಾಜ್ಯ. ಜನತಾ ರಾಜ್ಯ. ಅದನ್ನು ತರೋದಕ್ಕೆ ಏನ್ ಬೇಕೋ ಅದರ ಬಗ್ಗೆ ಚಿಂತೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
key words : actress-Radhika-CCB-Notice-With-regard-Former CM-H.D. Kumaraswamy-Responded