ಸಾರ್ವಜನಿಕರ ಜೊತೆ ಹೇಗೆ ವರ್ತನೆ ಮಾಡುತ್ತೇವೆ ಎಂಬುದು ಬಹಳ ಮುಖ್ಯ – ಆಲೋಕ್ ಕುಮಾರ್

ಮೈಸೂರು,ಫೆಬ್ರವರಿ,18,2025 (www.justkannada.in): ಸಾರ್ವಜನಿಕರ ಜೊತೆ ಹೇಗೆ ವರ್ತನೆ ಮಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ. ಅವರಿಗೆ ಹೇಗೆ ನಾವು ಸೇವೆಯನ್ನು ಒದಗಿಸಿ ಕೊಡಬೇಕು ಎಂಬ ವಿಶ್ವಸಾರ್ಹತೆ ನಮ್ಮಲ್ಲಿ ಬರಬೇಕು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ ಅಲೋಕ್ ಕುಮಾರ್ ಅವರು ಕಿವಿಮಾತು ಹೇಳಿದರು.

ಕರ್ನಾಟಕ ಪೊಲೀಸ್ ಅಕಾಡೆಮಿಯ ವತಿಯಿಂದ 46ನೇ ತಂಡದ ಪೊಲೀಸ್ ಸಬ್ -ಇನ್ಸ್ ಪೆಕ್ಟರ್ ಪ್ರಶಿಕ್ಷಣಾರ್ಥಿಗಳ ಬುನಾದಿ ತರಬೇತಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಸಾರ್ವಜನಿಕರ ಜೊತೆ ವರ್ತನೆ ಮಾಡುವುದರ ಬಗ್ಗೆ ತಿಳುವಳಿಕೆ ಇರಬೇಕು. ಸಾರ್ವಜನಿಕರ ಜೊತೆ ನಾವು ಉತ್ತಮವಾಗಿ ವರ್ತಿಸಿದರೆ ಅವರು ಸಹ ನಮಗೆ ಗೌರವವನ್ನು ನೀಡುತ್ತಾರೆ. ವಿನಮ್ರತೆ ಎಂಬುದು ಬಹಳ ಮುಖ್ಯವಾಗುವುದರ ಜೊತೆಗೆ ಶಿಸ್ತು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ನಾವು ಏಕೆ ಈ ಫೀಲ್ಡ್ ಅನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದು ಮುಖ್ಯವಾಗುತ್ತದೆ. ಪೊಲೀಸ್ ಇಮೇಜ್ ಎಂಬುದು ಬಹಳ ಮುಖ್ಯವಾಗಿರುವುದರಿಂದ ತರಬೇತಿಯಲ್ಲಿ ಇದ್ದಂತಹ ಹಳೆಯ ವಿಷಯವನ್ನು ತೆಗೆದು ಈ ಫೀಲ್ಡ್ ಗೆ ಯಾವುದು ಮುಖ್ಯ ಅಂತಹ ವಿಷಯಗಳನ್ನು ಪ್ರಸ್ತುತವಾಗಿ ಜಾರಿಗೆ ತಂದಿದ್ದೇವೆ ಎಂದು ತಿಳಿಸಿದರು.

ಪ್ರಾಯೋಗಿಕವಾಗಿ ಉಪಯೋಗವಾಗುತ್ತಿರುವಂತಹ ಅಂದರೆ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಅಲ್ಲಿ ಏನೆಲ್ಲಾ ಹೊಸ ಹೊಸ ವಿಷಯಗಳು ಬರುತ್ತವೆಯೋ ಅವುಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಾವು ಕಲಿಯುವ ವಿಷಯಗಳಲ್ಲಿ ಬದಲಾವಣೆಯನ್ನು ಮಾಡಿಕೊಂಡು ಪ್ರಸ್ತುತ ನವೀಕರಿಸಿದ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಲೇಸರ್ ಪ್ಲಾನ್, ಕಾಂನ್ಪಿಡೆನ್ಸ್, ವೃತ್ತಿ ತರಬೇತಿ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕು. ಸಾರ್ವಜನಿಕರೊಂದಿಗೆ ಸಂವಹನವನ್ನು ನಡೆಸಬೇಕು ನಾವು ಹೇಗೆ ಸಾರ್ವಜನಿಕರ ಜೊತೆ ಮಾತನಾಡುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.

ಯಾವುದೇ ತರಬೇತಿಯಾದರೂ ಉದ್ದೇಶಪೂರ್ವಕವಾಗಿ ಇರಬೇಕು. ನಮ್ಮ ದೇಶದಲ್ಲಿ ತರಬೇತಿ ಉತ್ತಮವಾಗಿ ಇರುವುದರ ಜೊತೆಗೆ ವಿಧಾನ ಶಾಸ್ತ್ರವು ಚೆನ್ನಾಗಿರಬೇಕು. ನಮ್ಮ ಕೆಲಸದ ಬಗ್ಗೆ ನಮಗೆ ಮನವರಿಕೆಯಾಗಬೇಕು. ನಾವು ಪ್ರತಿಯೊಂದು ವಿಷಯದ ಬಗ್ಗೆ ಹೆಚ್ಚು ಗಮನವನ್ನು ನೀಡಬೇಕು ಎಂದು ಹೇಳಿದರು.

ಏಕಾಗ್ರತೆಯಿಂದ ಮನಸಿಟ್ಟು ಕೆಲಸವನ್ನು ಮಾಡಬೇಕು. ಜೊತೆಗೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಎಂಬುದು ಮುಖ್ಯವಾಗಿರುವುದರಿಂದ ಫಿಟ್ನೆಸ್ ಎಂಬುದು ಬಹಳ ಮುಖ್ಯವಾಗುತ್ತದೆ. ಆದುದರಿಂದ ತರಬೇತಿಯಲ್ಲಿ ಇರುವಂತಹ ಎಲ್ಲ ಸೌಲಭ್ಯಗಳನ್ನು ಬಳಸಿಕೊಳ್ಳಿ. ನಿಮಗೆ ಏನಾದರೂ ತೊಂದರೆ ಬಂದಲ್ಲಿ ನಮಗೆ ತಿಳಿಸಿ ನಿಮ್ಮ ಜೊತೆ ನಾವು ಯಾವಾಗಲೂ ಇರುತ್ತೇವೆ ಎಂದು ಹೇಳಿದರು.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ಮಾತನಾಡಿ ನಿಮ್ಮ ಮುಂದೆ ನೂರು ಜನ ಇದ್ದರು ನಿಮ್ಮ ಸ್ಥಾನದ ಆಯ್ಕೆಯ ನಿರ್ಧಾರಗಳನ್ನು ನೀವು ತೆಗೆದುಕೊಳ್ಳಬೇಕು. ಹೆಚ್ಚು ಜನ ಪೊಲೀಸ್ ಉದ್ಯೋಗಕ್ಕೆ ಸೇರುತ್ತಿರುವುದು ಸಮವಸ್ತ್ರದ ಮೇಲೆ ಹೆಮ್ಮೆ ಇರುವುದರಿಂದ, ಹೆಮ್ಮೆಯೇ ಸ್ವಂತ ಶಕ್ತಿ ಎಂದು ಹೇಳಿದರು.

ಶಿಸ್ತು ಎಂಬುದು ಬಹಳ ಮುಖ್ಯವಾಗುತ್ತದೆ. ಅಧಿಕಾರಿಗಳು ಸಮಾಜದಲ್ಲಿ ಸೇವೆಯನ್ನು ಸಲ್ಲಿಸುವ ತರ ಇರಬೇಕು, ಪ್ರತಿ ದಿನ ಏನೆಲ್ಲಾ ಬದಲಾವಣೆಗಳು ಆಗುತ್ತಾ ಇವೆ ತಂತ್ರಜ್ಞಾನ ಹೇಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತಾ ಇರಬೇಕು ಎಂದು ಹೇಳಿದರು.

ದಕ್ಷಿಣ ವಲಯದ ಪೊಲೀಸ್ ಆಯುಕ್ತರಾದ ಬೋರಲಿಂಗಯ್ಯ ಅವರು ಮಾತನಾಡಿ ತರಬೇತಿಯಲ್ಲಿ ನಾವು ಮೊದಲು ಶಿಸ್ತು, ದೈಹಿಕ ಸಾಮರ್ಥ್ಯ, ಜ್ಞಾನ, ವ್ಯಕ್ತಿತ್ವವನ್ನು ವೃದ್ಧಿ ಮಾಡಿಕೊಳ್ಳಬೇಕು. ತರಬೇತಿಯಲ್ಲಿ ಜ್ಞಾನ ಮತ್ತು ವೃತ್ತಿಪರ ಜ್ಞಾನವನ್ನು ಬೆಳೆಸಿಕೊಳ್ಳಿ. ಕೆಪಿಎಸ್ ತಂಡ ಎಂಬ ಒಳ್ಳೆಯ ವಾತಾವರಣದಲ್ಲಿ ಶಿಸ್ತನ್ನು ಮುರಿಯದೆ ತಮ್ಮ ತರಬೇತಿಯನ್ನು ಪೂರ್ಣಗೊಳಿಸಿ. ಒಂದು ತಂಡವನ್ನಾಗಿ ಉಳಿಸಿಕೊಳ್ಳಲು ಪ್ರಯತ್ನವನ್ನು ಪಡಿ, ಓದುವುದರ ಬಗ್ಗೆ ಹೆಚ್ಚು ಗಮನವನ್ನು ನೀಡಿ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಷ್ಣುವರ್ದನ್, ಕೆಪಿಸಿ ಕಲಬುರ್ಗಿಯ ಪ್ರಾಂಶುಪಾಲರಾದ ಕಿಶೋರ್ ಬಾಬು, ಕಾನೂನು ಮತ್ತು ಸುವ್ಯವಸ್ಥೆಯ ಉಪಪೋಲಿಸ್ ಆಯುಕ್ತರಾದ ಮುತ್ತುರಾಜ್, ಉಪಸ್ಥಿತರಿದ್ದರು.

Key words: mysore, police, public, Additional Director General of Police,  Alok Kumar