ಮೈಸೂರು,ಫೆಬ್ರವರಿ,11,2025 (www.justkannada.in): ಉದಯಗಿರಿ ಪೊಲೀಸ್ ಠಾಣೆ ಬಳಿ ನಡೆದ ಕಲ್ಲುತೂರಾಟ ಗಲಾಟೆಯಲ್ಲಿ 7 ಮಂದಿ ಪೊಲೀಸರಿಗೆ ಗಾಯಗಳಾಗಿದ್ದು, ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಎಡಿಜಿಪಿ ಹಿತೇಂದ್ರ ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಎಡಿಜಿಪಿ ಹಿತೇಂದ್ರ, ಗಲಾಟೆ ಮಾಡಿದವರ ಬಂಧನಕ್ಕೆ ಸ್ಥಳೀಯ ಪೊಲೀಸರಿಂದ ಟೀಂ ರಚನೆ ಮಾಡಲಾಗಿದೆ. ಅವಹೇಳನಕಾರಿ ಪೋಸ್ಟರ್ ಹಾಕಿದ ವಿಚಾರದಲ್ಲಿ ಆರೋಪಿಯನ್ನ ಬೇಗ ಬಿಟ್ಟು ಬಿಡುತ್ತಾರೆ ಅಂತಾ ಕೆಲವರು ಗಲಾಟೆ ಮಾಡಿದ್ದಾರೆ. ಪೋಸ್ಟರ್ ವಿಚಾರದಲ್ಲಿ ಕೆಲವು ವಂದತಿ ಹಬ್ಬಿದ್ದಕ್ಕೆ ಗಲಾಟೆಯಾಗಿದೆ.
ಗಲಾಟೆ ಹಿಂದೆ ಯಾರಿದ್ದಾರೆ, ಯಾವುದಾದರೂ ಸಂಘಟನೆ ಇದೆಯಾ? ಎಂದುಬದರ ಬಗ್ಗೆ ತನಿಖೆ ಮೂಲಕ ಗೊತ್ತಾಗುತ್ತದೆ ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ ಎಂದು ಎಡಿಜಿಪಿ ಹಿತೇಂದ್ರ ತಿಳಿಸಿದ್ದಾರೆ.
Key words: 7 police, injured ,Udayagiri ,riots, ADGP, Hitendra