ಬೆಂಗಳೂರು,ಸೆ,27,2019(www.justkannada.in): ಆದಿಚುಂಚನಗಿರಿ ಶ್ರೀಗಳ ಫೋನ್ ಸಹ ಟ್ಯಾಪ್ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು ಈ ಬಗ್ಗೆ ಮಾತನಾಡಿದ ಸಚಿವ ಆರ್.ಅಶೋಕ್, ಶ್ರೀಗಳನ್ನ ರಾಜಕೀಯಕ್ಕೆ ಎಳೆದು ಫೋನ್ ಟ್ಯಾಪ್ ಮಾಡಿದ್ದು ಸರಿಯಲ್ಲ. ಶ್ರೀಗಳ ಫೋನ್ ಟ್ಯಾಪ್ ಮಾಡಿದವರಿಗೆ ನಾಚಿಕೆಯಾಗಬೇಕು. ಆದಿಚುಂಚನಗಿರಿ ಮಠದ ಶ್ರೀಗಳದ್ದು ಉದಹಾರಣೆಯಷ್ಟೇ. ಇನ್ನು ಯಾವ ಯಾವ ಸ್ವಾಮೀಜಿಗಳ ಫೋನ್ ಟ್ಯಾಪ್ ಆಗಿದೆಯೋ ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.
ಹಾಗೆಯೇ ಉಪ್ಪು ತಿಂದವರು ನೀರು ಕುಡಿಯಬೇಕು. ಕುಡಿಯುತ್ತಾರೆ. ಯಾರ ತಲೆ ಮೇಲೆ ಗೂಬೆ ಕೂರುತ್ತೆ. ಯಾರ ತಲೆ ಮೇಲೆ ಕಾಗೆ ಕೂರುತ್ತೆ ಇನ್ನೆರೆಡು ದಿನ ಕಾದು ನೋಡಿ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.
Key words: Adi Chunchanagiri shri- phone-tap-Minister-R. Ashok