ಮೈಸೂರು,ಫೆಬ್ರವರಿ,03,2021(www.justkannada.in) : ರಂಗಾಯಣವು ಕಾಡಂಚಿನ ಹಾಡಿಗಳ ಜನರಲ್ಲಿ ಸಾಮಾಜಿಕ ಅರಿವು ಮೂಡಿಸಲು ಫೆಬ್ರವರಿ ೨೩ರಂದು ‘ಗಿರಿ ರಂಗಪಯಣ’ ಹಾಗೂ ‘ನಮ್ಮ ಜನ ನಮ್ಮ ಸಂಸ್ಕೃತಿ-ಗಿರಿಜನೋತ್ಸವ’ ಕಾರ್ಯಕ್ರಮಗಳ ಆಯೋಜಿಸಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ರಂಗಾಯಣದ ಯೋಜನೆಗಳ ಕುರಿತು ಮಾಹಿತಿ ನೀಡಿದ ಅವರು, ರಂಗಾಯಣವು ಬುಡಕಟ್ಟು ಜನರ ಸಾಂಸ್ಕೃತಿಕ ಜನಪದ ಕಲೆ ಪರಿಚಯಿಸುವ ಹಿನ್ನೆಲೆಯಲ್ಲಿ ‘ನಮ್ಮ ಜನ ನಮ್ಮ ಸಂಸ್ಕೃತಿ-ಗಿರಿಜನೋತ್ಸವ’ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಗಿರಿಜನೋತ್ಸವಕ್ಕೆ ರಾಜ್ಯದ ವಿವಿಧೆಡೆಗಳಿಂದ ಬುಡಕಟ್ಟು ಜನಪದ ಕಲೆಗಳ ತಂಡವು ಆಗಮಿಸಲಿದ್ದು, ಗಿರಿ ರಂಗಪಯಣ ಯೋಜನೆಯಲ್ಲಿ ಗಿರಿಜನ ವಸತಿ ಶಾಲೆಯ ೧೨ ಶಿಬಿರಾರ್ಥಿಗಳಿಗೆ ೧೦ ದಿನಗಳ ಕಾಲ ‘ಅರಿವಿನೆಡೆಗೆ ಆದಿವಾಸಿ’ ಎಂಬ ಸಾಮಾಜಿಕ ಬೀದಿ ನಾಟಕ ಕಲಿಸಲಾಗುತ್ತಿದೆ ಎಂದು ತಿಳಿಸಿದರು.
key words : Adivasis-Social-Awareness-raise-Rangayana-Special-Program