ಬೆಂಗಳೂರು,ಫೆ,17,2020(www.justkannada.in): ಇಂದಿನಿಂದ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗಿದ್ದು ಮೊದಲ ದಿನವಾದ ಇಂದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿ ವಿಧಾನಸಭೆ ಮತ್ತು ವಿಧಾನಪರಿಷತ್ ಕಲಾಪ ನಾಳೆಗೆ ಮುಂದೂಡಲಾಯಿತು.
ವಿಧಾನಮಂಡಲ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದರು. ಬಳಿಕ ಅಗಲಿದ ಗಣ್ಯರಿಗೆ ವಿಧಾನಸಭೆ ವಿಧಾನಪರಿಷತ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು
ಮಾಜಿ ರಾಜ್ಯಪಾಲ ಟಿ ಎನ್ ಚತುರ್ವೇದಿ, ಮಾಜಿ ಸಚಿವ ಡಿ ಮಂಜುನಾಥ್, ಪೇಜಾವರ ವಿಶ್ವೇಶತೀರ್ಥ ಶ್ರೀ, ಮಾಜಿ ಸಚಿವ ವೈಜನಾಥ್ ಪಾಟೀಲ್, ಮಾಜಿ ಸಚಿವ ಮಲ್ಲಾರಿ ಗೌಡ ಪಾಟೀಲ, ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ, ಮಾಜಿ ಶಾಸಕ ನಾರಾಯಣ ರಾವ್ ಗೋವಿಂದ ತರಳೆ, ಮಾಜಿ ಶಾಸಕ ಚಂದ್ರಕಾಂತ ಸಿಂದೋಲ್, ಮಾಜಿ ಲೋಕಾಯುಕ್ತ ಎನ್ ವೆಂಕಟಾಚಲ, ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ, ಹಿರಿಯ ಯಕ್ಷಗಾನ ಕಲಾವಿದ ಹೊಸ್ತೋಟ ಮಂಜುನಾಥ ಭಾಗವತ ಸೇರಿ ಒಟ್ಟು 13 ಜನ ಗಣ್ಯರ ನಿಧನಕ್ಕೆ ಕಲಾಪದಲ್ಲಿ ಸಂತಾಪ ಸೂಚನೆ ಮಾಡಲಾಯಿತು.
ನಂತರ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನ ನಾಳೆ ಬೆಳಿಗ್ಗೆ 11 ಗಂಟೆಗೆ ಮುಂದೂಡಿದರು.
Key words: Adjournment –session-tomorrow- Condolences