ಬೆಂಗಳೂರು,ಜು,22,2019(www.justkannada.in): ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ನಿರ್ಧಾರ ಆಗುವವರೆಗೆ ವಿಶ್ವಾಸಮತಯಾಚನೆ ಮುಂದೂಡಿ ಎಂದು ಸ್ಪೀಕರ್ ಗೆ ಸಚಿವ ಕೃಷ್ಣಭೈರೇಗೌಡ ಮನವಿ ಮಾಡಿದರು.
ವಿಶ್ವಾಸಮತಯಾಚನೆ ಪ್ರಸ್ತಾಪ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಚಿವ ಕೃಷ್ಣಭೈರೇಗೌಡ, ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಮೊದಲು ನಿರ್ಧಾರವಾಗಲಿ. ಅತೃಪ್ತ ಶಾಸಕರ ರಾಜೀನಾಮೆ ಮತ್ತು ಅನರ್ಹತೆ ಬಗ್ಗೆ ಕ್ರಮ ಕೈಗೊಳ್ಳಲು ಸುಪ್ರೀಂಕೋರ್ಟ್ ನಿಮಗೆ ಸ್ವತಂತ್ರ ನೀಡಿದೆ. ಹೀಗಾಗಿ ಅತೃಪ್ತ ಶಾಸಕರ ರಾಜೀನಾಮೆ ತಿರಸ್ಕರಿಸಿ ಇಲ್ಲದಿದ್ದರೇ ಅನರ್ಹಗೊಳಿಸಿ. ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವವರೆಗೆ ವಿಶ್ವಾಸಮತಯಾಚನೆ ಮುಂದೂಡಿ ಎಂದು ಮನವಿ ಮಾಡಿದರು.
ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರ ಚರ್ಚೆ ಮುಂದುವರೆದಿದ್ದು ಇಂದು ಸಹ ವಿಶ್ವಾಸಮತಯಾಚನೆ ನಡೆಯುವುದು ಅನುಮಾನವಾಗಿದೆ. ನಾಳೆ ಸುಪ್ರೀಂಕೋರ್ಟ್ ತೀರ್ಪು ಇದ್ದು ಇದನ್ನ ನೆಪ ಮಾಡಿ ಇಂದು ಸಹ ವಿಶ್ವಾಸ ಮತಯಾಚನೆ ಮುಂದೂಡಿಕೆಗೆ ದೋಸ್ತಿ ಪಕ್ಷದ ಸದಸ್ಯರು ಕಸರತ್ತು ನಡೆಸುತ್ತಿದ್ದಾರೆ ಎನ್ನಲಾಗಿದೆ.
Key words: Adjournment –vote of confidence– resignation –rebel MLA-Minister Krishna Bhaira gowda.