ಲಂಡನ್, ಜುಲೈ 06, 2019 (www.justkannada.in): ಭಾರತದ ದಿಗ್ಗಜ ಕ್ರಿಕೆಟಿಗ 27 ವರ್ಷಗಳ ಹಿಂದೆ ನಿರ್ಮಿಸಿದ್ದ ವಿಶ್ವದಾಖಲೆಯನ್ನು ಅಫ್ಘಾನಿಸ್ತಾನದ ಯುವ ಬ್ಯಾಟ್ಸ್ ಮೆನ್ ಇಕ್ರಮ್ ಅಲಿ ಖಿಲ್ ಮುರಿದಿದ್ದಾರೆ.
ಗುರುವಾರ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಪಂದ್ಯದಲ್ಲಿ ಇಕ್ರಮ್ 93 ಎಸೆತಗಳಲ್ಲಿ 86 ರನ್ ಗಳಿಸಿ ವಿಶ್ವಕಪ್ ಪಂದ್ಯದಲ್ಲಿ 80 ಕ್ಕಿಂತ ಹೆಚ್ಚು ರನ್ ಗಳಿಸಿದ ಅತ್ಯಂತ ಕಿರಿಯ ಬ್ಯಾಟ್ಸ್ ಮನ್ ಎಂಬ ಗೌರವಕ್ಕೆ ಪಾತ್ರರಾದರು.
ಈ ಮೂಲಕ ಸಚಿನ್ ತೆಂಡೂಲ್ಕರ್ 1992 ರ ವಿಶ್ವಕಪ್ ನಲ್ಲಿ ಜಿಂಬಾಂಬ್ವೆ ವಿರುದ್ಧ ನಿರ್ಮಿಸಿದ್ದ ವಿಶ್ವದಾಖಲೆ ಮುರಿದಿದ್ದಾರೆ. ಗುರುವಾರ ನಡೆದ ಪಂದ್ಯದಲ್ಲಿ ಇಕ್ರಮ್ ಈ ಸಾಧಾನೆ ಮಾಡಿದ್ದಾರೆ. ಅವರಿಗೆ 18 ವರ್ಷ 278 ದಿನ ವಯಸ್ಸಾಗಿತ್ತು. ಸಚಿನ್ ತೆಂಡೂಲ್ಕರ್ 1992 ರಲ್ಲಿ ದಾಖಲೆ ಸ್ಥಾಪಿಸಿದ ಸಂದರ್ಭದಲ್ಲಿ 318 ದಿನಗಳಾಗಿತ್ತು.