ಮೈಸೂರು,ಆಗಸ್ಟ್,18,2020(www.justkannada.in): ದಕ್ಷಿಣ ಆಫ್ರಿಕಾದ ಆನ್ ವ್ಯಾನ್ ಡೈಕ್ ಚಿರತೆ ಕೇಂದ್ರದಿಂದ 1:2 ಆಫ್ರಿಕನ್ ಹಂಟಿಂಗ್ ಚಿರತೆಗಳು ಮೈಸೂರು ಮೃಗಾಲಯಕ್ಕೆ ಆಗಮಿಸಿವೆ.
ಭಾರತದಲ್ಲಿ ಆಫ್ರಿಕನ್ ಹಂಟಿಂಗ್ ಚಿರತೆಗಳು ಕೇವಲ ಎರಡು ಮೃಗಾಲಯಗಳಲ್ಲಿ ಇದ್ದು ಅದರಲ್ಲಿ ಮೈಸೂರು ಮೃಗಾಲಯವೂ ಒಂದಾಗಿದೆ. ಈ ಹಿಂದೆ ಮೈಸೂರು ಮೃಗಾಲಯದಲ್ಲಿ 2011ರಿಂದ 2019ರವರೆಗೆ ಆಫ್ರಿಕನ್ ಹಂಟಿಂಗ್ ಚಿರತೆಗಳನ್ನ ಇರಿಸಲಾಗಿತ್ತು.
ಈ ಕುರಿತು ಪ್ರತಿಕ್ರಿಯಿಸಿರುವ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ, ಇವುಗಳ ಆಗಮನದಿಂದ ವೀಕ್ಷಕರಿಗೆ ಅಳಿವಿನಂಚಿನಲ್ಲಿರುವ ಆಫ್ರಿಕಾದ ಬೆಕ್ಕಿನ ಜಾತಿಯ ಈ ಪ್ರಾಣಿಯನ್ನು ನೋಡಲು ಅವಕಾಶ ಸಿಕ್ಕಿದೆ. ಭೇಟೆ ಚಿರತೆಗಳು ಸೇರಿದಂತೆ ಒಟ್ಟು 5 ಪ್ರಭೇದದ ದೊಡ್ಡ ಬೆಕ್ಕುಗಳನ್ನು ಮೈಸೂರು ಮೃಗಾಲಯ ಹೊಂದಿದೆ. ಈ ವೇಗದ ಭೂ ಸಸ್ತನಿಗಳು ಕ್ವಾರಂಟೈನ್ ಅವಧಿಯು ಮುಗಿದ ನಂತರ ವೀಕ್ಷಕರ ವೀಕ್ಷಣೆಗೆ ಪ್ರದರ್ಶಿಸಲಾಗುವುದು ಎಂದು ಮಾಹಿತಿ ನೀಡಿದರು.
Key words: African -Hunting –Leopard- arrives -Mysore Zoo