ನಟ ದರ್ಶನ್ ಬಂಧನ ಬೆನ್ನಲ್ಲೆ ಗೆಳತಿ ಪವಿತ್ರಾಗೌಡ ಪೊಲೀಸರ ವಶಕ್ಕೆ.

ಬೆಂಗಳೂರು,ಜೂನ್,11,2024 (www.justkannada.in):  ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸೇರಿ 10 ಜನರ ಬಂಧನ ಬೆನ್ನಲ್ಲೆ ಇದೀಗ ನಟ ದರ್ಶನ್ ಗೆಳತಿ ಪವಿತ್ರಾಗೌಡರನ್ನ ಆರ್ ಆರ್ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೆಜ್ ಮಾಡಿದ್ದ ಎಂದು ರೇಣುಕಸ್ವಾಮಿ ಅವರನ್ನು ಬೆಂಗಳೂರಿಗೆ ಕರೆಸಿ ಹಲ್ಲೆ ನಡೆಸಿ . ಜೂನ್ 8ರಂದು ಕೊಲೆ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು.  ನಟ ದರ್ಶನ್ ಅವರ ಸೂಚನೆ ಮೇರೆಗೆ ಕೊಲೆ ಮಾಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಕೊಲೆ ಪ್ರಕರಣ ವಿಚಾರವಾಗಿ ಇಂದು ಪೊಲೀಸರು ನಟ  ದರ್ಶನ್ ರನ್ನ ರ್ಯಾಢಿಸನ್ ಬ್ಲ್ಯೂ ಹೋಟೆಲ್ ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ.

ಪ್ರಕರಣ ಸಂಬಂಧ ಪಟ್ಟಣಗೆರೆ ಜಯಂತ್ ಪುತ್ರ ವಿನಯ್ , ಕಿರಣ್,  ಮಧು ,ಲಕ್ಷ್ಮಣ್ , ಆನಂದ್, ರಾಘವೇಂದ್ರ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಈ ಬೆನ್ನಲ್ಲೆ ಇದೀಗ ಪವಿತ್ರಗೌಡರನ್ನ ಕೊಲೆ ಪ್ರಕರಣದಲ್ಲಿ ಒಳಸಂಚಿನ ಆರೋಪದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Key words: After, actor, Darshan, Pavitra Gowda, arrest