ಬೆಂಗಳೂರು, ಆಗಸ್ಟ್ 21, 2020 (www.justkannada.in): ಚೆನ್ನೈ ಸೂಪರ್ ಕಿಂಗ್ಸ್ ತಂಡ 6 ದಿನಗಳ ಅಭ್ಯಾಸ ಶಿಬಿರದಲ್ಲಿ ಭಾಗಿಯಾಗಿದ್ದ ಮಿಸ್ಟರ್ ಕೂಲ್ ಮಹೇಂದ್ರ ಸಿಂಗ್ ಧೋನಿ, ಸ್ಟೇಡಿಯಂ ಸ್ಟ್ಯಾಂಡ್ಗೆ ಸಿಕ್ಸರ್ ಬಾರಿಸುತ್ತಿದ್ದರು.
ಅಭ್ಯಾಸ ನಡೆಸುತ್ತಿದ್ದಾಗ ಮಹೇಂದ್ರ ಸಿಂಗ್ ಧೋನಿ ಉತ್ತಮವಾಗಿ ಸ್ಟ್ರೈಕ್ ರೊಟೇಟ್ ಮಾಡುತ್ತಿದ್ದರು. ಎಲ್ಲಾ ದಿಕ್ಕುಗಳಲ್ಲಿ ಸಿಕ್ಸರ್ ಹೊಡೆಯುತ್ತಿದ್ದರು ಎಂದು ಸಿಎಸ್ಕೆ ಸಿಇಒ ಕೆ.ಎಸ್.ವಿಶ್ವನಾಥನ್ ಸಾಯಿ ಮಾಹಿತಿ ನೀಡಿದ್ದಾರೆ.
ಧೋನಿ ಆತ್ಮವಿಶ್ವಾಸ, ಸಂತೋಷದಿಂದಲೇ ಕಾಲ ಕಳೆಯುತ್ತಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರಿಗೂ ಸಹ ಇನ್ಸ್ಟಾಗ್ರಾಮ್ ಪೋಸ್ಟ್ನಿಂದ ನಿವೃತ್ತಿಯ ಸುದ್ದಿ ತಿಳಿಯಿತು. ಅದು ತಂಡಕ್ಕೂ ಸರ್ಪ್ರೈಸ್ ಆಗಿತ್ತು ಎಂದಿದ್ದಾರೆ.