ಮೈಸೂರು,ಆಗಸ್ಟ್,2,2021(www.justkannada.in): ಲಾಕ್ ಡೌನ್ ನಂತರ ಮೈಸೂರಿನ ಚಾಮರಾಜೇಂದ್ರ ಮೃಗಾಲಯಕ್ಕೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದು ಪ್ರವಾಸಿಗರ ದಂಡು ಹರಿದು ಬರುತ್ತಿರುವ ಹಿನ್ನೆಲೆ ಮೃಗಾಲಯದ ಆರ್ಥಿಕತೆ ಚೇತರಿಕೆ ಕಾಣಿತ್ತಿದೆ ಎನ್ನಲಾಗಿದೆ.
ನಿನ್ನೆ(ಭಾನುವಾರ) ಒಂದೇ ದಿನ ಮೈಸೂರಿನ ಮೃಗಾಲಯಕ್ಕೆ 6 ಸಾವಿರ ಪ್ರವಾಸಿಗರು ಭೇಟಿ ನೀಡಿದ್ದು, ಹೆಚ್ಚಾಗಿ ಪ್ರವಾಸಿಗರ ಆಗಮನದಿಂದ ಮೃಗಾಲಯದ ಸಿಬ್ಬಂದಿ ಫುಲ್ ಖುಷ್ ಆಗಿದ್ದಾರೆ. ಸಾಮಾನ್ಯ ದಿನಗಳಂತೆಯೇ ಪ್ರಾಣಿ ಪ್ರೀಯರು ಮೃಗಾಲಯಕ್ಕೆ ಭೇಟಿ ನೀಡುತ್ತಿದ್ದು ಇದರಿಂದಾಗಿ ಮೃಗಾಲಯದ ಆರ್ಥಿಕತೆ ವೃದ್ದಿಸಿದೆ ಎಂದು ಕರ್ನಾಟಕ ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹಾದೇವ ಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾತನಾಡಿರುವ ಅವರು, ಸರ್ಕಾರದಿಂದ ಈಗಾಗಲೇ ನಾವು ಕೇಳಿದಷ್ಟು ಅನುದಾನ ಬಿಡುಗಡೆ ಮಾಡಿದ್ದಾರೆ. ಇನ್ನೂ 23 ಕೋಟಿ ಅನುದಾನಕ್ಕೆ ಸಿಎಂ ಬಸವರಾಜು ಬೊಮ್ಮಾಯಿ ಅವರನ್ನ ಕೇಳಿದ್ದಿವಿ. ಬಿಎಸ್ ಯಡಿಯೂರಪ್ಪ ಅವಧಿಯಲ್ಲಿ 8 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಇನ್ನೂ ಉಳಿದ ಹಣವನ್ನ ಸಚಿವ ಸಂಪುಟ ರಚನೆಯ ಬಳಿಕ ಅವರ ಮುಂದೆ ಈ ಬಗ್ಗೆ ಪ್ರಸ್ತಾಪ ಮಾಡಿ ಹಣ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ಮೃಗಾಲಯದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಇನ್ನೂ ಎರಡು ಮೂರು ದಿನಗಳಲ್ಲಿ ಸಿಂಗಾಪುರ್ ನಿಂದ ವಾರೋಂಗೋಟ ಮತ್ತು ಗೊರಿಲ್ಲಗಳು ಬರಲಿವೆ ಎಂದು ಎಲ್.ಆರ್. ಮಹಾದೇವ ಸ್ವಾಮಿ ತಿಳಿಸಿದರು.
ENGLISH SUMMARY…
Tourists flock Myuru Zoo after lifting lockdown: Financial position improves
Mysuru, August 2, 2021 (www.justkannada.in): The Chamarajendra Zoological Garden in Mysuru has registered an increase in visitors following lifting of lockdown, resulting in improving its financial condition.
People are flocking the zoo. There were more than 6,000 visitors to the zoo on Sunday bringing smile on the faces of the employees of the zoo. As a result of this, the financial condition of the zoo authority has improved according to Karnataka State Zoo Authority Chairman L.R. Mahdevaswamy.
Speaking in Mysuru about this he informed that the State Government has released grants as per the demand. “We had appealed the Chief Minister Basavaraj Bommai to release an additional Rs. 23 crore grant. Then CM B.S. Yediyurappa had released Rs. 8 crore. However, the present Chief Minister has assured of releasing the pending amount after cabinet formation. As of now the financial position is improving. A Orangutan and Gorilla are supposed to arrive from Singapore within the next 2-3 days,” he informed.
Keywords: Chamarajendra Zoological Garden/ Mysuru Zoo/ people flock/ financial condition/ improve
Key words: After -lock-down- Mysore Zoo- Recovery – economy- LR Mahadeva Swamy