ರಾಯಚೂರು,ಜನವರಿ,14,2021(www.justkannada.in): ಸಂಕ್ರಮಣ ಮುಗಿದ ಬಳಿಕ ಸಿಡಿ ಬ್ಲಾಸ್ಟ್ ಆಗುತ್ತೆ. ಒಬ್ಬೊಬ್ಬರು ಒಂದೊಂದು ಸಿಡಿ ಬಿಡುಗಡೆ ಮಾಡುತ್ತಾರೆ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಹೊಸ ಬಾಂಬ್ ಸಿಡಿಸಿದ್ದಾರೆ.
ರಾಯಚೂರಿನಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ವಿಶ್ವನಾಥ್, ಕುಟುಂಬ ರಾಜಕಾರಣದಿಂದ ಯಡಿಯೂರಪ್ಪ ಹಾಳಾಗ್ತಾರೆ. ವಿಜಯೇಂದ್ರನ ಹಸ್ತಕ್ಷೇಪದಿಂದಲೇ ಶಾಸಕರು ಬಂಡೆದಿದ್ದಾರೆ. ರಾಜ್ಯದಲ್ಲಿ ಒಬ್ಬ ಭ್ರಷ್ಟ, 420 ಗೆ ಮಂತ್ರಿ ಸ್ಥಾನ ನೀಡಿದ್ದಾರೆ. ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿದ್ದಾರೆ. ಮುನಿರತ್ನ ಅವರನ್ನು ಕಡೆಗಣಿಸಿದ್ದಾರೆ. ಹಿಂದುಳಿದ ವರ್ಗದ ಶಾಸಕ ಮುನಿರತ್ನ ಕಡೆಗಣಿಸಿದ್ದಾರೆ. ದಲಿತ ಸಮುದಾಯದ ಶಾಸಕ ನಾಗೇಶ್ ರಾಜೀನಾಮೆ ಪಡೆದಿದ್ದಾರೆ. ನಾಗೇಶ್ ಮುನಿರತ್ನ ಕಡೆಗಣಿಸಿ ಭ್ರಷ್ಟರಿಗೆ ಮಣೆ ಹಾಕಿದ್ದಾರೆ. ಇದಕ್ಕಾ ನಾವು ರಾಜೀನಾಮೆ ಕೊಟ್ಟು ಬಂದಿದ್ದು? ರಮೇಶ್ ಜಾರಕಿಹೊಳಿ ಇದನ್ನೆಲ್ಲಾ ಯಾಕೆ ಬೆಂಬಲಿಸುತ್ತಿದ್ದಾರೋ ಗೊತ್ತಿಲ್ಲ. ನೋಡ್ತಾ ಇರಿ ಸಂಕ್ರಾಂತಿ ಬಳಿಕ ಒಬ್ಬೊಬ್ಬರು ಒಂದೊಂದು ಸಿಡಿ ಬ್ಲಾಸ್ಟ್ ಮಾಡ್ತಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಕರ್ನಾಟಕದಲ್ಲಿ ಮತ್ತೆ ಸನ್ ಸ್ಟ್ರೋಕ್ ಮುಂದುವರೆಯುತ್ತದೆ. ಸನ್ ಸ್ಟ್ರೋಕ್ ನಿಂದ ಬಿಜೆಪಿ ಹಾಳಾಗುತ್ತಿದೆ. ಜನತಾ ಪರಿವಾರ ಸಹ ಸನ್ ಸ್ಟ್ರೋಕ್ ನಿಂದ ಹಾಳಾಯಿತು. ಕಾಂಗ್ರೆಸ್ ಪಕ್ಷ ಕೂಡ ಸನ್ ಸ್ಟ್ರೋಕ್ ನಿಂದಲೇ ಹಾಳಾಯ್ತು, ಕುಟುಂಬ ರಾಜಕಾರಣದಿಂದ ಯಡಿಯೂರಪ್ಪ ಹಾಳಾಗಿದ್ದಾರೆ.
Key words: after-sankranthi- CD -will blast- H.Vishwanath- new bomb.