ಮೈಸೂರು, ಜು.03, 2020 : (www.justkannada.in news) : ತಾಯಿ ಸಾವಿನ ನೋವಿನಲ್ಲೂ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾದ ವಿದ್ಯಾರ್ಥಿನಿ, ಬಳಿಕ ಪರೀಕ್ಷೆ ಮುಗಿಸಿಕೊಂಡು ತಾಯಿ ಅಂತಿಮ ಸಂಸ್ಕಾರದಲ್ಲಿ ಭಾಗಿ.
ಮೈಸೂರಿನ ರೂಪಾನಗರದ ಎಸ್.ಎಸ್.ಎಲ್.ಸಿ.ಪರೀಕ್ಷಾ ಕೇಂದ್ರದಲ್ಲಿ ಹಿಂದಿ ಪರೀಕ್ಷೆ ದಿನವಾದ ಇಂದು ಈ ಘಟನೆ ನಡೆದಿದೆ.
ಮೈಸೂರು ತಾಲೂಕು ಬಿರಿಹುಂಡಿ ಗ್ರಾಮದ ನಿವಾಸಿ. ಬಾಲಕಿ ತಾಯಿ ಲಕ್ಷ್ಮಮ್ಮ, ಕ್ಯಾನ್ಸರ್ ನಿಂದ ಬಳಲುತ್ತಿದ್ದು, ನಿನ್ನೆಯಷ್ಟೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ತಾಯಿ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಹಿಂದೆಟು ಹಾಕಿದ್ದಳು.
ಬಳಿಕ ಈ ವಿಷಯ ತಿಳಿದು, ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಇವತ್ತಿನ ಹಿಂದಿ ಪರೀಕ್ಷೆಗೆ ಗ್ರಾಮದ ಮುಖಂಡ, ಬೀರಿಹುಂಡಿ ಗ್ರಾಪಂ ಮಾಜಿ ಸದಸ್ಯ ಶಿವಣ್ಣ ಕರೆತಂದರು. ಯುವತಿಗೆ ಧೈರ್ಯ ತುಂಬಿ ತನ್ನ ಕಾರಿನಲ್ಲಿ ಪರೀಕ್ಷಾ ಕೇಂದ್ರಕ್ಕೆ ಕರೆದಂತ ಶಿವಣ್ಣ. ನಂತರ ವಿದ್ಯಾರ್ಥಿನಿ ಪರೀಕ್ಷೆ ಬರೆದ ಬಳಿಕ ಆಕೆ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲು ಆಕೆಯನ್ನು ವಾಪಸ್ ಕರೆದುಕೊಂಡು ಹೋದರು.
oooo
key words : after- sslc exam- girl attend – her mothers- cremation- at mysore