ಬೆಂಗಳೂರು,ಏಪ್ರಿಲ್,25,2023(www.justkannada.in): ಸರ್ಕಾರದಿಂದ ಮುಸ್ಲಿಮರ 2ಬಿ ಮೀಸಲಾತಿ ರದ್ದು ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತ್ತು ಎಂಬ ಸುದ್ದಿಯಾಗಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸರ್ಕಾರದ 2ಬಿ ಮೀಸಲಾತಿ ರದ್ದು ಆದೇಶಕ್ಕೆ ತಡೆಯಾಜ್ಞೆ ನೀಡಿಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿರುವ ಎಜಿ ಪ್ರಭುಲಿಂಗ ನಾವದಗಿ, 2ಬಿ ಮೀಸಲಾತಿ ರದ್ದು ಆದೇಶಕ್ಕೆ ತಡೆಯಾಜ್ಞೆ ನೀಡಿಲ್ಲ. ಈ ಹಿಂದೆ ರಾಜ್ಯ ಸರ್ಕಾರವೇ ಭರವಸೆ ನೀಡಿತ್ತು. ಮುಂದಿನ ವಿಚಾರಣೆವರೆಗೆ ಹೊಸ ಮೀಸಲಾತಿಯಂತೆ ನೇಮಕಾತಿ ಮಾಡಲ್ಲ ಎಂದು ಸರ್ಕಾರ ಹೇಳಿತ್ತು.
ಸರ್ಕಾರದ ಹೇಳಿಕೆ ಹಿನ್ನೆಲೆ. ವಿಚಾರಣೆಯನ್ನ ಸುಪ್ರೀಂಕೋರ್ಟ್ ಮೇ 9ಕ್ಕೆ ಮುಂದೂಡಿಕೆ ಮಾಡಿದೆ ಎಂದು ಎಜಿ ಪ್ರಭುಲಿಂಗ ನಾವದಗಿ ತಿಳಿಸಿದರು.
Key words: AG- Prabhulinga Navadagi -clarifies – no stay – 2B reservation- cancellation -order.