ಬೆಂಗಳೂರು,ಡಿಸೆಂಬರ್,26,2020(www.justkannada.in): ಜೆಡಿಎಸ್ ಮನೆ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ನಾನು ಇರುವಷ್ಟು ದಿನ ಮಾತ್ರ ಅಲ್ಲ. ನಾನು ಹೋದ್ಮೇಲೆನೂ ಈ ಪಕ್ಷ ಉಳಿಯಲಿದೆ. ಅದಕ್ಕಾಗಿ ನನ್ನ ಹೋರಾಟ ಇರಲಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ತಿಳಿಸಿದರು.
ಬಿಜೆಪಿ ಜೊತೆ ವಿಲೀನ ಅಥವಾ ಮೈತ್ರಿ ವಿಚಾರಕ್ಕೆ ಸಂಬಂಧಿಸಿದಂತೆ ಜೆ ಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಕಳೆದ ಮೂರು ತಿಂಗಳಿಂದ ಪಕ್ಷದ ಬಗ್ಗೆ ಹಲವಾರು ರೀತಿ ವ್ಯಾಖ್ಯಾನ ನೀಡಲಾಗುತ್ತಿದೆ. ಅದನ್ನ ಮನರಂಜನೆ ಕಾರ್ಯಕ್ರಮ ಅಂತಾ ಹೇಳಬಹುದು ವೈಯಕ್ತಿಕವಾಗಿ ಯಾರ ಬಗ್ಗೆನೂ ಮಾತನಾಡಲ್ಲ ರಾಜಕಾರಣಿಗಳು ಏನೇನ್ ಮಾತಾಡ್ತಾರೋ ಅದನ್ನ ಕ್ರೂಢೀಕರಿಸಿ ನಿಮ್ಮ ಕರ್ತವ್ಯ ಮಾಡಿದ್ದೀರಿ. ಪ್ರಾದೇಶಿಕ ಪಕ್ಷ ಉಳಿಸಿಕೊಳ್ಳಲು ಎಷ್ಟು ಕಷ್ಟ ಅನ್ನೋದು ಮುಖ್ಯಸ್ಥರಿಗೆ ಗೊತ್ತಿರುತ್ತೆ ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತ ಮಾತಾಡೋದನ್ನ ನೋಡಿದ್ದೀನಿ ಇದಕ್ಕೆ ಕಾರಣ ಕುಮಾರಸ್ವಾಮಿನಾ, ರೇವಣ್ಣನಾ ಯಾರು ಕಾರಣ ? ಜೆಡಿಎಸ್ ಬಗ್ಗೆ ಮಾತನಾಡಲು ಹೆಚ್.ಡಿ ಕುಮಾರಸ್ವಾಮಿ, ರೇವಣ್ಣ ಕಾರಣವಲ್ಲ ಎಂದರು.
ಈ ಹಿಂದೆ ನನ್ನ ಎಲ್ಲಾರು ಹೊರಹಾಕಿದ್ರು, ಏಕಾಂಕಿಯಾಗಿದ್ದೆ, ಯಾರ ಹೆಸ್ರನ್ನೂ ಹೇಳೋಕ್ಕಾಗಲ್ಲ. ಮತ್ತೆ ವಾಪಾಸ್ ಎಲ್ಲಾ ನನ್ನತ್ರಾನೇ ಬಂದ್ರು. ಯಾರಾದ್ರೂ ನಂಗೆ ಹತ್ತು ರೂಪಾಯಿ ಕೊಟ್ಟಿದ್ದಾರಾ. ಈಗ ಕೆಲವರು ಬದುಕಿದ್ದಾರೆ ಅವ್ರಿಗೆ ಹೇಳ್ತಿದ್ದೇನೆ. ಒಬ್ಬ ಕನ್ನಡಿಗ ಪ್ರಧಾನಿ ಆಗೋ ಮಟ್ಟವೂ ಬಂತು. ನಾನು ಪ್ರಧಾನಿ ಆಕಾಂಕ್ಷಿಯಾಗಿರಲಿಲ್ಲ, ಅಪೇಕ್ಷೆ ಇರಲಿಲ್ಲ, ಅದು ವಿಧಿ , ನನ್ನ ರಾಜೀನಾಮೆ ನಂತರ ನನ್ನ ಬಿಟ್ಟು ಸರ್ಕಾರ ಕೂಡ ಮಾಡಿದ್ರು. ಪ್ರಾದೇಶಿಕ ಪಕ್ಷ ತನ್ನದೇ ಶಕ್ತಿಯಿಂದ ಆಡಳಿತ ನಡೆಸುವ ಶಕ್ತಿ ಬಂದಮೇಲೂ ಯಾಕೆ ಇದು ಈ ತಪ್ಪು ನಮ್ಮ ನಾಯಕರೇ ಹೊತ್ತುಕೊಳ್ಳಬೇಕು ಜನರ ಮೇಲೆ ಆಪಾದನೆ ಮಾಡೋಕೆ ಹೋಗಲ್ಲ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
ಕಾಂಗ್ರೆಸ್ ಮುಕ್ತ ಭಾರತ ಮಾಡಲು ಹೋದಾಗ ನಾವು ನಿಮ್ಮ ಜೊತೆ ನಿಲ್ಲಲಿಲ್ಲವೇ…?
ತೆನೆ ಹೊತ್ತ ಮಹಿಳೆ ಬಗ್ಗೆ ಈ ರೀತಿಯೆಲ್ಲಾ ಮಾತಾಡಬಾರದು. ಈ ಪಕ್ಷವನ್ನ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ. ಸೋಲು ಗೆಲುವು ಮಾಮೂಲಿ. ನಾನು ಕಾಂಗ್ರೆಸ್ ಬಗ್ಗೆ ಮಾತಾಡಿದ್ರೆ ತುಂಬಾ ಮಾತಾನಾಡುತ್ತೇನೆ. ಕಾಂಗ್ರೆಸ್ ಬಗ್ಗೆ ನನಗೆ ಗೊತ್ತಿದೆ. ಕಾಂಗ್ರೆಸ್ ಮುಕ್ತ ಭಾರತ ಮಾಡಲು ಮೋದಿ ಹೋಗಿದ್ರು. ಆಗ ನಾವು ಕಾಂಗ್ರೆಸ್ ಜೊತೆ ನಿಲ್ಲಲಿಲ್ಲವೇ ಅದಕ್ಕೆ ಕುಮಾರಸ್ವಾಮಿ ಕಾರಣವಲ್ಲ, ನಾನೇ. ಈ ಸಲ ನನ್ನ ಸೆಕ್ಯೂಲರ್ ಶಿಪ್ ನ್ನ ಪರೀಕ್ಷೆ ಮಾಡಲಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ತಮಿಳುನಾಡಲ್ಲಿ ಏನಾಯ್ತು, ಯಾರ್ ಮನೆ ಬಾಗಿಲಿಗೆ ಹೋಗಿದ್ರು ಬಿಹಾರದಲ್ಲಿ ಏನಾಯ್ತು, ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಸರ್ಕಾರ ಮಾಡಿಕೊಂಡಿಲ್ವಾ…? ಗೋದ್ರಾ ಹತ್ಯಾಕಾಂಡ ವಿಚಾರ ಏನಾಯ್ತು. ಮುಸ್ಲಿಂರನ್ನ ಉಳಿಸುವ ಶಕ್ತಿ ಇವರಿಗೆ ಇಲ್ಲ. ಮುಸ್ಲಿಂ ರನ್ನ ದಾರಿ ತಪ್ಪಿಸಿದ್ದು ಯಾರು..? ಎಂದು ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ತಿರುಗೇಟು ನೀಡಿದರು.
130 ಇದ್ದದ್ದೂ 78 ಏಕೆ ಬಂತು..? ಹಾಲು, ಅಕ್ಕಿ ಭಾಗ್ಯದ ಮೇಲೆ ಭಾಗ್ಯ ಕೊಟ್ರಿ ಏನಾಯ್ತು…?
ಇದೇ ವೇಳೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಹೆಚ್.ಡಿ ದೇವೇಗೌಡರು, ಸಭಾಪತಿ ರಾಜೀನಾಮೆ ವಿಚಾರದಲ್ಲಿ ನನ್ನ ಸೆಕ್ಯೂಲರ್ ಪ್ರಶ್ನೆ ಮಾಡಿದ್ದಾರೆ. ಇವರು ಮಾಡ್ತಿರೋದು ಹಾಗಾದ್ರೆ ಏನು? ಕಾಂಗ್ರೆಸ್ 130 ಸ್ಥಾನ ಇದ್ದದ್ದೂ 78 ಏಕೆ ಬಂತು..? ಹಾಲು, ಅಕ್ಕಿ ಭಾಗ್ಯದ ಮೇಲೆ ಭಾಗ್ಯ ಕೊಟ್ರಿ ಏನಾಯ್ತು..? ಜೆಡಿಎಸ್ ಜೊತೆ ಹೋಗಿದ್ದಕ್ಕೆ ಅಂತಾ ಹೇಳ್ತೀರಾ..? ನಾವು 28 ಸೀಟ್ ಕಳೆದುಕೊಂಡ್ವಿ, ಅವ್ರು 50 ಸೀಟು ಕಳೆದುಕೊಂಡ್ರು. ಹಾಸನದಲ್ಲಿ ಈಗ ಕಾಂಗ್ರೆಸ್ ಏನಾಗಿದೆ, ಒಂದು ನಗರಸಭೆ ಚುನಾವಣೆ ಗೆಲ್ಲೋಕೆ ಆಗಲಿಲ್ಲ, ಇದು ಆನಂದವಾ ನಿಮಗೆ ಎಲ್ಲದಕ್ಕೂ ತೆರೆ ಎಳೆಯುತ್ತಿದ್ದೇನೆ ಎಂದು ಕಿಡಿಕಾರಿದರು.
ಜೆಡಿಎಸ್ ಮನೆ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ. ಜೆಡಿಎಸ್ ಮನೆ ಅಲುಗಾಡುತ್ತಿದೆ ಅಂತೀರಾ, ಏನ್ ಅಲುಗಾಡುತ್ತಿದೆ ರೀ , ಕೆಲವರು ಲಘುವಾಗಿ ಮಾತಾಡ್ತಾರೆ, ಈ ತರ ಮಾತಾಡಿ ಯಾವ್ಯಾವಾಗ ಯಾರ್ಯಾರು ನಮ್ಮ ಮನೆ ಬಾಗಿಲಿಗೆ ಬಂದ್ರ ಅಂತಾ ಗೊತ್ತಿದೆ. ಜೆಡಿಎಸ್ ಪಕ್ಷ ನನ್ನಿಂದಾನೇ ಉಳಿಯಬೇಕಾ, ಪಕ್ಷದಲ್ಲಿ ಇನ್ನೂ ಇದ್ದಾರೆ. ಕಾಂಗ್ರೆಸ್ ನಲ್ಲೂ ಮೂವರು ಅಲುಗಾಡುತ್ತಿದ್ದಾರೆ. 2018 ರಲ್ಲಿ ಸರ್ಕಾರ ರಚನೆಗೆ ಸಿದ್ದು, ಖರ್ಗೆ, ಮುನಿಯಪ್ಪ, ಗುಲಾಂ ನಬಿ ಎಲ್ಲಾರೂ ಬಂದಿದ್ರು ಎಂದು ಟೀಕಿಸಿದರು.
ಮಾತನಾಡುವಾಗ ಕಿಂಚಿತ್ತಾದ್ರೂ ವಾಸ್ತವ ಘಟನೆ ಬಗ್ಗೆ ಮಾತಾಡಬೇಕು. ನಾನು ಬೇಸಿಕಲ್ ಕಾಂಗ್ರೆಸ್ ಮ್ಯಾನ್. ಕೆಲವು ತಿಕ್ಕಾಟದಿಂದ ನನ್ನನ್ನು ಹೊರಹಾಕಿದ್ರು, ಆ ಸನ್ನಿವೇಶದಲ್ಲಿ ಅದಕ್ಕೆ ನಾನೇ ಕಾರಣ
ಇನ್ನು ಮೈತ್ರಿ ಸರ್ಕಾರದ ವೇಳೆ ಸಭಾಪತಿ ಸ್ಥಾನ ನಮಗೆ ಬಿಟ್ಟುಕೊಡಿ ಎಂದು ನಾವು ಕೇಳಿದ್ದೇವು ಆಗಾ ವಿಧಾನಸಭೆಯಲ್ಲಿ ರಮೇಶ್ ಕುಮಾರ್ ಸ್ಪೀಕರ್ ಆಗಿದ್ದರು , ಮುಂದೆ ಮಾಡೋಣ ಎಂದು ಹೇಳಿದ್ದರು ಆದ್ರೆ ಅವರು ಕೊಟ್ಟ ಮಾತು ನಡೆದುಕೊಂಡಿಲ್ಲ
ಬಳಿಕ ಸಿದ್ದರಾಮಯ್ಯ ಎಸ್ ಆರ್ ಪಾಟೀಲ್ ಸಭಾಪತಿ ಮಾಡೋಣ ಎಂದ್ರು , ನಾನು ಬಸವರಾಜ್ ಹೊರಟ್ಟಿ ಮಾಡೋಣ ಎಂದೆ. ಇವರಿಬ್ಬರು ಬೇಡ ಬೇರೆ ಹೆಸರನ್ನ ದೆಹಲಿಯ ನಾಯಕರು ಪೋನ್ ಮಾಡಿ ನನಗೆ ಹೇಳಿದ್ರು. ಆಗ ನಾವು ಉಪಸಭಾಪತಿ ಸ್ಥಾನಕ್ಕೆ ಒಪ್ಪಿಕೊಂಡಿದ್ದೇವೆ. ನನ್ನ ಸೆಕ್ಯೂಲರ್ ನ್ನ ಟೆಸ್ಟ್ ಮಾಡಲು ಬರ್ಬೇಡಿ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು.
ನಾನು ಇರುವಷ್ಟು ದಿನ ಮಾತ್ರ ಅಲ್ಲ. ನಾನು ಹೋದ್ಮೇಲೆನೂ ಈ ಪಕ್ಷ ಉಳಿಯಲಿದೆ. ಅದಕ್ಕಾಗಿ ನನ್ನ ಹೋರಾಟ ಇರಲಿದೆ. ಕುಮಾರಸ್ವಾಮಿ ಅವರ ಜೊತೆಯೇ ಮಾತಾಡಿದ್ದೇನೆ. ಏಕ ತೀರ್ಮಾನ ಬೇಡ, ಕೋರ್ ಕಮಿಟಿ ಮಾಡಿ ಅಲ್ಲಿ ಚರ್ಚೆ ಮಾಡೋಣ ಎಂದಿದ್ದೆ ನಾನು, ಕುಮಾರಸ್ವಾಮಿ, ರೇವಣ್ಣ ತೀರ್ಮಾನ ಮಾಡೋದು ಬೇಡ ಎಂದು ಹೇಳಿದ್ದೆ. ಶಿರಾ ಉಪಚುನಾವಣೆಯಲ್ಲಿ ಸೋತ ಬಳಿಕ ನನಗೆ ತುಂಬಾ ನೋವಾಗಿದೆ ನಮಗೆ ಇನ್ನು ಕಾರ್ಯಕರ್ತರು ಇದ್ದಾರೆ.
ಸಂಕ್ರಾಂತಿ ಬಳಿಕ ಕುಮಾರಸ್ವಾಮಿ ಅವರೇ ತಮ್ಮದೇ ಐಡಿಯಾಗಳನ್ನ ಮುಂದುವರಿಸ್ತಾರೆ….
ಕಾರ್ಯಕರ್ತರಿಗೆ ಹುಮ್ಮಸ್ಸು ಇದೆ, ಹಾಗಾಗಿ ಯಾರಿಗಾದರೂ ಜವಾಬ್ದಾರಿ ಕೊಡಬೇಕಿದೆ. ಯಾರು ಕೆಲಸ ಮಾಡ್ತಾರೆ ಅವರಿಗೆ ಜವಾಬ್ದಾರಿ ಕೋಡುತ್ತೇವೆ ನಾವು ಕರೆದುಕೊಂಡು ಬಂದು ನಿಲ್ಲಿಸೋದು ಅವರು ಹೋಗೋದು ಬೇಡ. ಸಂಕ್ರಾಂತಿ ಬಳಿಕ ಕುಮಾರಸ್ವಾಮಿ ಅವರೇ ತಮ್ಮದೇ ಐಡಿಯಾಗಳನ್ನ ಮುಂದುವರಿಸ್ತಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹೇಳಿದರು
ಜನವರಿ 7ರಂದು ಸಭೆ ಸೇರುತ್ತಾರೆ. ಆ ಸಭೆಯಲ್ಲಿ ಕುಮಾರಸ್ವಾಮಿ ತಮ್ಮ ಐಡಿಯಾಗಳನ್ನು ಹೇಳ್ತಾರೆ ಆ ಬಳಿಕ ಜನವರಿ 14ರ ನಂತರ ಆ ಐಡಿಯಾದಂತೆ ಪಕ್ಷ ಸಂಘಟನೆ ಮುಂದುವರಿಸ್ತಾರೆ. ರಾಷ್ಟ್ರೀಯ ಪಕ್ಷಗಳಿಗೆ ಹೈಕಮಾಂಡ್ ಇದೆ, ನಮಗೆ ಯಾವ ಹೈಕಮಾಂಡ್ ಕೂಡ ಇಲ್ಲ , ನಾನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ಹೋಗಲು ಸಾಧ್ಯವಿಲ್ಲ, ವಯಸ್ಸಿಗೆ ತಕ್ಕಂತೆ ನನ್ನ ಕೆಲಸ ಮಾಡುತ್ತೀನಿ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
Key words: against –Congress-No one – shake – JDS-Former Prime Minister- HD Deve Gowda.