ಚಾಮರಾಜನಗರ,ಜುಲೈ,23,2021(www.justkannada.in): ಸಿಎಂ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡುವ ಬಗ್ಗೆ ಸುಳಿವು ನೀಡಿದ ಬೆನ್ನಲ್ಲೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಸಂಸದರು, ಶಾಸಕರು ವಿರೋಧ ಪಕ್ಷದ ನಾಯಕರು ತಮ್ಮ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಚಾಮರಾಜನಗರ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಇದೀಗ ಸ್ಪೋಟಕ ರಹಸ್ಯವೊಂದನ್ನ ಬಿಚ್ಚಿಟ್ಟಿದ್ದಾರೆ.
ಹೌದು, ಬಿಎಸ್ ಯಡಿಯೂರಪ್ಪ ಎರಡು ವರ್ಷ ಸಿಎಂ ಆಗಲು ಅಗ್ರಿಮೆಂಟ್ ಆಗಿತ್ತು. ಸಮ್ಮಿಶ್ರ ಸರ್ಕಾರದ ಪತನದ ವೇಳೆ ಹೈಕಮಾಂಡ್ ಮತ್ತು ಬಿಎಸ್ ಯಡಿಯೂರಪ್ಪ ನಡುವೆ ಒಪ್ಪಂದವಾಗಿತ್ತು ಎಂದು ಸಂಸದ ಶ್ರೀನಿವಾಸ್ ಪ್ರಸಾದ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಚಾಮರಾಜನಗರದಲ್ಲಿ ಮಾತನಾಡಿರುವ ಶ್ರೀನಿವಾಸ್ ಪ್ರಸಾದ್, ನಿಮಗೆ ವಯಸ್ಸಾಗಿದ್ದರೂ ಅವಕಾಶ ನೀಡುತ್ತೇವೆ. ಎರಡು ವರ್ಷ ಸಿಎಂ ಆಗಿ ಎಂದು ಸಿಎಂ ಬಿಎಸ್ ವೈಗೆ ಹೈಕಮಾಂಡ್ ತಿಳಿಸಿತ್ತು. ಹೀಗಾಗಿ ವಿಶೇಷ ಸಂದರ್ಭದಲ್ಲಿ ಬಿಎಸ್ ವೈ ಸಿಎಂ ಆಗಿದ್ದರು. ಈ ಮಧ್ಯೆ 75 ವರ್ಷ ಆದವರು ಸಿಎಂ ಹುದ್ದೆಯಲ್ಲಿ ಇರಬಾರದು. ಹೀಗಾಗಿ ಸಿಎಂ ಬಿಎಸ್ ಯಡಿಯೂರಪ್ಪ ಒಪ್ಪಂದದಂತೆ ನಡೆದುಕೊಂಡಿದ್ದಾರೆ. ಸಿಎಂ ಬಿಎಸ್ ವೈ ರಾಜೀನಾಮೆ ಒಂದು ಹಂತಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ENGLISH SUMMARY….
The high command had made a two-year agreement with BSY to be CM: MP Srinivas Prasad reveals secret
Chamarajanagara, July 23, 2021 (www.justkannada.in): Several MPs, MLAs, and opposition party leaders are giving their views and opinions following the hint given by Chief Minister B.S. Yediyurappa about his resignation. Chamarajanagara MP V. Srinivas Prasad has revealed a secret about this.
Yes. According to him, the BJP high command had made an agreement with Yediyurappa to be the Chief Minister for two years. The agreement was made at the time of the collapse of the coalition government in the State.
Speaking at Chamarajanagara today Srinivas Prasad observed that the high command had BSY that they would offer him to be the CM even if he is older for the post as per the party rule. The party has made it mandatory that nobody above 75 years of age should be in the Cm’s post. “That is why they had made an agreement and accordingly BSY is resigning now, Srinivas Prasad said.
Keywords: Chamarajanagara/ MP/ V. Srinivas Prasad/ reveals secret/ CM BSY/ agreement/ high command
Key words: Agreement – High Command – BS yeddyurappa-two year- CM-MP-Srinivas Prasad