ಬೆಂಗಳೂರು,ಫೆಬ್ರವರಿ,10,2021(www.justkannada.in) : ಕೇಂದ್ರ ಸರ್ಕಾರ ತನ್ನ ಬೆಳೆಯನ್ನು ಮಾರಟ ತಾನೇ ಮಾರಾಟ ಮಾಡುವ ಹಕ್ಕನ್ನು ರೈತನಿಗೆ ಸರ್ಕಾರ ನೀಡಿದೆ. ಆದರೆ, ಕೃಷಿ ಮಸೂದೆ ವಿರುದ್ದ ತೋಳ್ ಬಲದ ಮೂಲಕ ಹೋರಾಟ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸಪೂಜಾರಿ ಕಿಡಿಕಾರಿದ್ದಾರೆ.
ಮಲ್ಲೇಶ್ವರಂನ ಹವ್ಯಕ ಮಹಾಸಭಾ ಸಭಾಂಗಣದಲ್ಲಿ ಬಿ.ಜೆ.ಪಿ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಹಿಂದುಳಿದ ವರ್ಗಗಳ ರಾಜ್ಯ ವಿಶೇಷ ಸಭೆ ಉದ್ಘಾಟಿಸಿ ಅವರು ಮಾತನಾಡಿದರು
ಪಕ್ಷದ ಕಾರ್ಯಕರ್ತರು ಕೃಷಿ ಮಸೂದೆ ಲಾಭಂಶವನ್ನು ಪ್ರತಿಯೊಬ್ಬ ರೈತರಿಗೆ ಮನಮುಟ್ಟುವಂತೆ ತಲುಪಿಸಬೇಕು. ಮಾಜಿ ಪ್ರಧಾನಿ ವಾಜಪೇಯಿ ಮತ್ತು ಎಲ್.ಕೆ.ಆಡ್ವಾಣಿರವರ ಕಂಡ ಕನಸು ಇಂದು ನರೇಂದ್ರಮೋದಿರವರ ನೇತೃತ್ವದಲ್ಲಿ ಸಮರ್ಥ,ಸಶಕ್ತ ಭಾರತ ನಿರ್ಮಾಣವಾಗುತ್ತಿದೆ. ರಾಜ್ಯದಲ್ಲಿ ಧ್ವನಿ ಇಲ್ಲದಿರುವ ಹಿಂದುಳಿದ ವರ್ಗದ ಜನರಿಗೆ ಶಕ್ತಿ ತುಂಬವ ಕೆಲಸ ಮಾಡಬೇಕು. ಹಿಂದುಳಿದ ವರ್ಗದವರು ಎಲ್ಲರು ಒಗ್ಗಟ್ಟಾಗಬೇಕು ಎಂದು ಸಲಹೆ ನೀಡಿದರು.
ಸಚಿವ ಭೈರತಿ ಬಸವರಾಜ್ ಮಾತನಾಡಿ, ಹಿಂದುಳಿದ ವರ್ಗದಲ್ಲಿ ಜನಿಸಿ, ಗ್ರಾಮ ಪಂಚಾಯಿತಿಯಿಂದ ಇಂದು ಸಚಿವನಾಗಿ ಕಾರ್ಯನಿರ್ವಹಿಸಿದ ಬಗ್ಗೆ ಹೆಮ್ಮೆ ಆನಿಸುತ್ತದೆ. ರಾಜ್ಯದ ಹೆಚ್ಚಿನ ಜನಸಂಖ್ಯೆಯಲ್ಲಿ ಹಿಂದುಳಿದ ವರ್ಗದವರು ಇದ್ದಾರೆ ಆಯಾ ಕ್ಷೇತ್ರದಲ್ಲಿ ಸಂಘಟನೆ ಮಾಡಿ ಮುಂದಿನ ಬಜೆಟ್ ನಲ್ಲಿ ಹಿಂದುಳಿದ ವರ್ಗದ ಜನರ ಅಭಿವೃದ್ದಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು.
ಹಿಂದುಳಿದ ವರ್ಗದ ಬಿ.ಜೆ.ಪಿ.ರಾಜ್ಯಾಧ್ಯಕ್ಷ ನೆ.ಲ.ನರೇಂದ್ರಬಾಬು ಮಾತನಾಡಿ, ಸಂಘಟನೆ ಹಾಗೂ ಸರ್ಕಾರದ ಕಾರ್ಯಕ್ರಮದ ಪ್ರತಿ ಮನೆಗೆ ತಲುಪಬೇಕು.ಪ್ರಧಾನಿ ನರೇಂದ್ರಮೋದಿರವರ ಕಂಡ ಕನಸು ಅತ್ಮನಿರ್ಭಾರ ಭಾರತ ಸಾಕಾರಗೊಳಿಸಲು ಪ್ರತಿಯೊಬ್ಬ ಕಾರ್ಯಕರ್ತರು ಶ್ರಮಿಸಬೇಕು ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರವರು ಅಭಿವೃದ್ದಿ ಚಿಂತನೆಗಳು ನಾಡಿಗೆ ತಲುಪಬೇಕು. ರಾಜ್ಯದಲ್ಲಿ ಶೇಕಡ 64ರಷ್ಟು ಹಿಂದುಳಿದ ವರ್ಗದ ಜನಸಂಖ್ಯೆ ಇದೆ. ಹಿಂದುಳಿದ ವರ್ಗದ ಸಮಾಜ ಮಂಚೂಣಿಗೆ ಬರಬೇಕು ಆಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ನಗಾರಭಿವೃದ್ದಿ ಸಚಿವ ಬಿ.ಎ.ಬಸವರಾಜ್, ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್, ಹಿಂದುಳಿದ ವರ್ಗದ ಮುಖಂಡರು ಮಾಜಿ ಮಹಾನಗರ ಪಾಲಿಕೆ ಸದಸ್ಯರಾದ ಎ.ಹೆಚ್.ಬಸವರಾಜ್, ಗೋಪಿನಾಥ್ ರಾಜು ,ಗೋವಿಂದರಾಜು, ಎಂ.ಸಿ.ಶ್ರೀನಿವಾಸ್ ಗೋವಿಂದನಾಯ್ದು ಉಪಸ್ಥಿತರಿದ್ದರು.
key words : Agricultural Acts-opposite-Arm strength-Fighting-
Attempt-Minister-Kota Srinivasa Poojary