ಬೆಂಗಳೂರು,ಡಿಸೆಂಬರ್,10,2020(www.justkannada.in): ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ. ರೈತ ಮುಖಂಡರು ಪ್ರತಿಭಟನೆ ಹಿಂಪಡೆಯಬೇಕು. ಸಿಎಂ ಚರ್ಚೆಗೆ ಕರೆದಾಗ ಬರಬೇಕು. ರೈತ ಮುಖಂಡರ ಜತೆ ಚರ್ಚೆಗೆ ಸರ್ಕಾರ ಸದಾ ಸಿದ್ಧ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
ಮಾಧ್ಯಮಗಳ ಜತೆ ಇಂದು ಮಾತನಾಡಿದ ಕೃಷಿ ಸಚಿವ ಬಿ.ಸಿ ಪಾಟೀಲ್, ಈಗಾಗಲೇ ಪ್ರತಿಭಟನೆಗಳಿಂದ ಸಾರ್ಜನಿಕರು ಸಾಕಷ್ಟು ತೊಂದರೆಗೆ ಸಿಲುಕಿದ್ದಾರೆ. ಇದರಿಂದ ಮತ್ತೆ ಸಾರ್ವಜನಿಕರಿಗೆ ತೊಂದರೆಯಾಗುವುದು ಬೇಡ. ರೈತ ಮುಖಂಡರು ಪ್ರತಿಭಟನೆ ಹಿಂಪಡೆಯಬೇಕು ಎಂದು ಮನವಿ ಮಾಡಿದರು.
ರೈತರಲ್ಲಿ ಯಾರೂ ದಡ್ಡರಿಲ್ಲ. ಎಲ್ಲರೂ ಬುದ್ದವಂತರಿದ್ದಾರೆ. ಕೆಲ ರೈತರು ಮಾತ್ರ ಕಾಯ್ದೆ ಬೇಡ ಎನ್ನುತ್ತಿದ್ದಾರೆ. ಉಳಿದ ಎಲ್ಲರೂ ಕಾಯ್ದೆ ಪರವಾಗಿದ್ದಾರೆ. ರಾಜ್ಯದ ಜನರು ನಮ್ಮನ್ನ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ನವರಿಗೆ ಧರಣಿ ವೇಳೆ ಹಸಿರು ಶಾಲು ನೆನಪಾಗುತ್ತದೆ. ಹಸಿರು ಶಾಲು ಹಾಕಿಕೊಂಡಾಕ್ಷಣ ಅವರು ರೈತರಲ್ಲ. ರೈತರ ಬಗ್ಗೆ ನಮಗೆ ಕಾಳಜಿ ಇದೆ. ಕಾಂಗ್ರೆಸ್ ಟೀಕೆಗಳನ್ನ ಜನರು ಒಪ್ಪಿಕೊಳ್ಳುವುದಿಲ್ಲ ಎಂದು ಬಿ.ಸಿ ಪಾಟೀಲ್ ಹೇಳಿದರು.
Key words: Agricultural Amendment Act – not- revoked-government –discussions-Minister -BC Patil.