ಬೆಂಗಳೂರು,ನವೆಂಬರ್,28,2020(www.justkannada.in): ರಾಜ್ಯದ ಕೃಷಿ ವಿಶ್ವದ್ಯಾಲಯಗಳು ಗ್ರಾಮಗಳನ್ನು ದತ್ತು ಪಡೆಯಬೇಕು. ಈ ಮೂಲಕವೂ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕಾರಣವಾಗಬೇಕು. ಇದು ಅತೀ ಜರೂರಿನ ಕಾರ್ಯ ಎಂದು ಕೃಷಿ ಸಚಿವಗಳೂ ಆಗಿರುವ ಕೃಷಿವಿಶ್ವದ್ಯಾಲಯಗಳ ಸಹ ಕುಲಾಧಿಪತಿ ಬಿ.ಸಿ. ಪಾಟೀಲ್ ಕರೆ ನೀಡಿದರು.
ಕೃಷಿ ವಿಶ್ವವಿದ್ಯಾಲಯ ಬೆಂಗಳೂರು 54ನೇ ಘಟಿಕೋತ್ವವದಲ್ಲಿ ಪದವಿದಧರು, ಸ್ನಾತಕೋತ್ತರ ಪದವಿಧರರು, ಪಿ.ಎಚ್.ಡಿ. ಪಡೆದವರಿಗೆ ಪದವಿಗಳನ್ನು ಪ್ರದಾನ ಮಾಡಿ ಸಚಿವ ಬಿ.ಸಿ ಪಾಟೀಲ್ ಅವರು ಮಾತನಾಡಿದರು. ರಾಜ್ಯದಲ್ಲಿ ಒಟ್ಟು ಆರು ಕೃಷಿ ವಿಶ್ವವಿದ್ಯಾಲಯಗಳಿವೆ. ಇವುಗಳು ಪ್ರತಿವರ್ಷ ತಲಾ ನಾಲ್ಕು ಹಳ್ಳಿಗಳನ್ನು ದತ್ತು ಪಡೆದುಕೊಂಡು ಅಲ್ಲಿಯ ಕೃಷಿಯನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಿ ಮಾದರಿ ಗ್ರಾಮಗಳನ್ನಾಗಿ ಮಾಡಬೇಕಿದೆ ಎಂದರು.
ಕಳೆದ ಇಪ್ಪತ್ತು ವರ್ಷಗಳಿಂದ ರಾಜ್ಯದ ಕೃಷಿ ಇಲಾಖೆಯ ವೃಂದ – ನೇಮಕಾತಿ ನಿಯಮಾವಳಿಗಳಿಗೆ ತಿದ್ದುಪಡಿಯಾಗಿರಲಿಲ್ಲ. ನಾನು ಕೃಷಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇದರ ಬಗ್ಗೆ ಆಸಕ್ತಿ ವಹಿಸಿದೆ. ಅದು ಇತ್ತೀಚೆಗೆ ತಿದ್ದುಪಡಿಯಾಗಿದೆ. ಆಹಾರ ಮತ್ತು ಕೃಷಿ ಇಂಜಿನಿಯರಿಂಗ್ ವಿಷಯಗಳಲ್ಲಿ ಪದವಿ ಪಡೆದವರಿಗೆ ಶೇಕಡ 15ರಷ್ಟು ಹುದ್ದೆಗಳನ್ನು ಮೀಸಲಿಡಲಾಗಿದೆ ಎಂದು ಸಚಿವ ಬಿ.ಸಿ ಪಾಟೀಲ್ ವಿವರಿಸಿದರು.
ಪದವಿ, ಅತೀಹೆಚ್ಚು ಚಿನ್ನದ ಪದಕಗಳನ್ನು ಪಡೆದವರಲ್ಲಿ ವಿದ್ಯಾರ್ಥಿನಿಯರೇ ಅಧಿಕವಾಗಿದ್ದಾರೆ. ಇದು ಸಂತೋಷದ ಸಂಗತಿ. ಆದರೆ ಉದ್ಯಮಿಗಳಾದವರು, ಸರ್ಕಾರಿ ಉದ್ಯೋಗಿಗಳಾದವರ ಸಂಖ್ಯೆ ಗಮನಿಸಿದರೆ ಮಹಿಳೆಯರು ಕಡಿಮೆ ಇದ್ದಾರೆ. ಕೃಷಿ ಪದವಿ, ಸ್ನಾತಕೋತ್ತರ ಪದವಿ ಪಡೆದವರು ಕೃಷಿ ನವೋದ್ಯಮಿಗಳಾಗಿ ಹೊರಹೊಮ್ಮಬೇಕು. ಈ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಈ ಮಾದರಿಯಲ್ಲಿ ಇಂಥ ವಿದ್ಯಾರ್ಥಿನಿಯರ ಜೀವನಪಥ ಮುಂದುವರಿಯಲು ಕೃಷಿ ವಿಶ್ವವಿದ್ಯಾಲಯ ಆಸಕ್ತಿ ವಹಿಸಬೇಕು ಎಂದು ಸೂಚಿಸಿದರು.
ಪದವಿಗಳನ್ನು ಪಡೆದ ಎಲ್ಲರನ್ನೂ ಶ್ಲಾಘಿಸಿದ ಸಚಿವ ಬಿ.ಸಿ ಪಾಟೀಲ್, ನಿಮ್ಮೆಲ್ಲರ ಸಾಧನೆ ಚಿನ್ನದ ಪದಕ –ಪಟ್ಟಿಗಳನ್ನ ತೆಗೆದುಕೊಳ್ಳುವುದಕ್ಕಷ್ಟೇ ಸೀಮಿತವಾಗಬಾರದು. ನಿಮ್ಮ ಜ್ಞಾನ ಕೃಷಿಕರ ಏಳಿಗೆಗೆ ಸದುಪಯೋಗವಾಗಬೇಕು. ನೀವು ಸಾಧನೆ ಮಾಡಬೇಕಿರುವುದು ಬಹಳಷ್ಟಿದೆ. ನೊಂದ ರೈತ ಕಣ್ಣೀರು ಒರೆಸುವ ಕಾರ್ಯವನ್ನು ಮಾಡಬೇಕು.
ಭಾರತೀಯ ರೈತರದು ಮುಂಗಾರು ಮಳೆಯೊಂದಿಗಿನ ಜೂಜಿನ ಬದುಕು. ಮಳೆ ಅತಿಯಾದರೂ ಕಷ್ಟ – ತೀರಾ ಕಡಿಮೆಯಾದರೂ ಕಷ್ಟ. ಚಂಡಮಾರುತಗಳಿಂದಲೂ ಸಂಕಷ್ಟಕ್ಕೆ ಸಿಲುಕುತ್ತಾರೆ. ಇಂಥ ಕೃಷಿಕರ ಏಳಿಗೆಗೆ ಕಾರಣವಾಗುವ ಕಾರ್ಯಗಳನ್ನು ನೀವೇಲ್ಲರೂ ಮಾಡಬೇಕಿದೆ ಎಂದು ಪ್ರತಿಪಾದಿಸಿದರು.
ಅಖಿಲ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಡಾ. ಕೈಲಾಸವಡಿವೊ ಶಿವನ್ ಅವರು ಆನ್ ಲೈನ್ ಮೂಲಕ ಘಟಿಕೋತ್ಸವನ್ನುದ್ದೇಶಿಸಿ ಸಚಿವರು ಮಾತನಾಡಿದರು.
ಬಲವಿದ್ದವರೇ ಬದುಕುತ್ತಾರೆ ಎಂದು ಡಾರ್ವೀನ್ ಥಿಯರಿ ಹೇಳುತ್ತದೆ. ಅಶಕ್ತರೂ ಬದುಕಬಲ್ಲ ಸಮಾಜವನ್ನು ಇನ್ನಷ್ಟು ಸದೃಢವಾಗಿ ಕಟ್ಟುವಲ್ಲಿ ನಿಮ್ಮ ಪಾತ್ರ ಗಣನೀಯ ಎಂದ ಅವರು ತಮ್ಮ ಕೃಷಿಕ ಕುಟುಂಬದ ಹಿನ್ನೆಲೆ, ವಿದ್ಯಾರ್ಥಿ ದೆಶೆಯಲ್ಲಿ ಕೃಷಿಕಾರ್ಯದಲ್ಲ ಕುಟುಂಬದ ಹಿರಿಯರಿಗೆ ಸಹಾಯ ಮಾಡುತ್ತಿದ್ದನ್ನು ನೆನೆದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್. ರಾಜೇಂದ್ರ ಪ್ರಸಾದ್ ಅವರು ಸ್ವಾಗತ ಕೋರಿ ಶೈಕ್ಷಣಿಕ ವರದಿ ಮಂಡಿಸಿದರು. ಕುಲಸಚಿವರು ಸಾಂಪ್ರದಾಯಿಕ ಘಟಿಕೋತ್ಸವ ನಡವಳಿ ನೇತೃತ್ವ ವಹಿಸಿದ್ದರು.
ಪದವಿಧರರು ನೇರವಾಗಿ ಮತ್ತು ಆನ್ ಲೈನ್ ಮಖಾಂತರವೂ ಭಾಗವಹಿಸಿದ್ದರು.ಸಮಾರಂಭಕ್ಕೆ ಬಂದ ಇವರ ಕುಟುಂಬ ಸದಸ್ಯರು, ಆಸಕ್ತರಿಗೆ ನಡವಳಿಯ ಕಲಾಪವನ್ನು ಸಭಾಂಗಣದ ಹೊರಗೆ ಹಾಕಿದ್ದ ಬೃಹತ್ ಸಿಸಿಟಿವಿ ಪರದೆಗಳ ಮೂಲಕ ನೇರ ಪ್ರಸಾರ ಮಾಡಲಾಯಿತು.
English summary….
Agri Universities should adopt villages and become the cause of overall development: Minister B.C. Patil
Bengaluru, Nov. 28, 2020 (www.justkannada.in): “There are a total number of six Agriculture Universities in the State. They should think about adopting atleast four villages every year and try to contribute for overall development of agriculture in those villages and make them model villages,” opined Agriculture Minister B, who is also the Agricultural Universities Pro-Chancellor B.C. Patil.
He participated in the 54th Convocation of the Agricultural University, Bengaluru and conferred awards to the graduates, postgraduates and Ph.D. students.
“There were no amendments made to the agricultural department group – appointment rules from the last 20 years. I took interest in it after I took up the responsibility and it has been amended recently. Accordingly, 15% jobs have been reserved for candidates who do graduation in Food and Agriculture related subjects,” he said.
Expressing his happiness about the increasing number of girls who are graduating he also wanted them to think about commencing new start-ups in agricultural sector. There is a need to explore this sector and the university should think about how to help the girl students in this area, he added.
Dr. Kailasavadivo, President, All India Space Research Organisation inaugurated the convocation virtually and spoke.
DR. S. Rajendraprasad, Chancellor, Agriculture University welcomed and presented the educational report. There was physical participation and virtual participation of graduates.
Keywords: Minister B.C. Patil/ Agriculture University/ 54th Convocation
Key words: Agricultural university- holistic development -adoption – villages-Minister -BC Patil.