ತುಮಕೂರು,ಜ,2,2019(www.justkannada.in): ಕರ್ನಾಟಕ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿ. 8 ಕೋಟಿ ರೈತರ ಖಾತೆಗೆ ಹಣ ಜಮಾ. 12 ಕೋಟಿ ರೂ ಹಣ ಜಮಾವಣೆಯಾಗಿದೆ. ರೈತರ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡೋದು ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ತುಮಕೂರಿನ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಕೃಷಿ ಸಮ್ಮಾನ್ ಕಾರ್ಯಕ್ರಮಕ್ಕೆ ಗಿಡಕ್ಕೆ ನೀರೆರೆಯುವ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಹಸಿರು ಶಾಲು ಹೊದಿಸಿ ಮೈಸೂರು ಪೇಟಾ ತೊಡಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಕೃಷಿಸಚಿವ ನರೇಂದ್ರ ಸಿಂಗ್ ತೋಮರ್, ಕೇಂದ್ರ ಸಚಿವರಾದ ಡಿವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ ಉಪಸ್ಥಿತರಿದ್ದರು.
ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪ್ರಗತಿಪರ ರೈತರಿಗೆ ಪ್ರಧಾನಿ ನರೇಂದ್ರ ಮೋದಿ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಮಾಡಿದರು. ತುಮಕೂರಿನ ರಂಗಪ್ಪ ಮಹಾರಾಷ್ಟ್ರದ ನರೇಂದ್ರ ಗೋವೆಲ್. ಯುಪಿಯ ರಮೇಶ್ ಮಿಶ್ರಾ, ಬಿಹಾರದ ಗೋಪಾಲ್ ಪ್ರಸಾದ್ . ಮಧ್ಯಪ್ರದೇಶದ ಕರಣ್ ದೇವ್ ಸಿಂಗ್ ಸೇರಿ 32 ರೈತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನಂತರ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಿಷ್ಟು…..
ಎಲ್ಲರಿಗೂ ಸಮಸ್ಕಾರ ನಿಮ್ಮೆಲ್ಲರಿಗೂ ಹೊಸ ವರ್ಷ ಸಂಕ್ರಾಂತಿ ಶುಭಾಶಯಗಳು. ಹೊಸ ವರ್ಷ ಹೊಸದಶಕದಲ್ಲಿ ರೈತರ ದರ್ಶನ ಭಾಗ್ಯ ಸಿಕ್ಕಿದೆ. ಅನ್ನ ನೀಡುವ ರೈತರಿಗೆ ಅಭಾರಿಯಾಗುತ್ತೇನೆ. ಭಾರತದಲ್ಲಿ ಆಹಾರ ಉತ್ಪಾದನೆ ದಾಖಲೆ ಮಟ್ಟದಲ್ಲಿದೆ. ರೈತರಿಗೆ ಸನ್ಮಾನಿಸುವ ಪ್ರಶಸ್ತಿ ಪ್ರದಾನ ಮಾಡುವ ಸೌಭಾಗ್ಯ ಸಿಕ್ಕಿದೆ. ಕರ್ನಾಟಕ ಮತ್ತೊಂದು ಐತಿಹಾಸಿಕ ಘಟನೆಗೆ ಸಾಕ್ಷಿ. 8 ಕೋಟಿ ರೈತರ ಖಾತೆಗೆ ಹಣ ಜಮಾ. 12 ಕೋಟಿ ರೂ ಹಣ ಜಮಾವಣೆಯಾಗಿದೆ. ಕೃಷಿ ಸಮ್ಮಾನ್ ಸರ್ಕಾರದಿಂದ 1 ರೂಕೊಟ್ಟರೇ 15 ಪೈಸೆ ಮಾತ್ರ ತಲುಪುತ್ತಿತ್ತು. ಈಗ ದೆಹಲಿಯಿಂದ ಎಷ್ಟು ಹಣ ರವಾನೆಯಾಗುತ್ತೋ ಅಷ್ಟು ಹಣ ರೈತರ ಖಾತೆಗೆ ಜಮೆಯಾಗುತ್ತೆ. ಈ ಯೋಜನೆ ಜತೆ ಯಾವ ರಾಜ್ಯ ಜೋಡಣೆಯಾಗಿಲ್ಲವೂ ಎಲ್ಲಾ ರಾಜ್ಯಗಳು ಕೈಜೋಡಿಸುವ ಆಶಯವಿದೆ. ಯೋಜನೆ ಯಾವುದೇ ಒಂದು ಪಕ್ಷದ ಪರ ಅಲ್ಲ. ರೈತರ ವಿಚಾರದಲ್ಲಿ ಯಾವುದೇ ರಾಜಕೀಯ ಬೇಡ. ನಾವು ಕೃಷಿಯನ್ನ ತುಂಡು ತುಂಡಾಗಿ ನೋಡಿಲ್ಲ. ಕೃಷಿಯನ್ನ ನಾವು ವಿಂಗಡಿಸಿಲ್ಲ. ಸಮಗ್ರವಾಗಿ ನೋಡಿದ್ದೇವೆ ಎಂದರು.
ಮೀನುಗಾರರ ಆಳಸಮುದ್ರ ಮೀನುಗಾರಿಕೆಗೆ ನೆರವು ವಿಶೇಷ ಸಲಕರಣೆ ನೀಡುವ ಮೂಲಕ ಗೌರವಿಸಲಾಗುತ್ತದೆ. ಇಸ್ರೋ ನೆರವಿನಿಂದ ಹೊಸ ಸಲಕರಣೆ ನೀಡಿದ್ದೇವೆ. ದಶಕಗಳಿಂದ ಜಾರಿಯಾಗದೆ ಇದ್ದ ಯೋಜನೆಗಳು ಜಾರಿಯಾಗಿದೆ. ರೈತರ ಉತ್ಪನ್ನಗಳ ಮಾರಾಟಕ್ಕೆ ಯೋಜನೆ. ವಿಮಾ ಯೋಜನೆ ಸೇರಿ ಹಲವು ಯೋಜನೆ ಜಾರಿಯಾಗಿವೆ. ನೀರಾವರಿ ಯೋಜನೆ . ರೈತರ ಜಾನುವಾರುಗಳಿಗೆ ಕಡಿಮೆದರದಲ್ಲಿ ಲಸಿಕೆ ಸೇರಿ ಹಲವು ಕಾರ್ಯಕ್ರಮ ನೀಡಲಾಗುತ್ತಿದೆ.
5 ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ರೈತರ ಪಾಲು ಹೆಚ್ಚಿದೆ. ತೋಟಗಾರಿಕೆ ಮಸಾಲೆ ಪದಾರ್ಥ ರಪ್ತಿನಲ್ಲಿ ವಿಚಾರದಲ್ಲಿ ಲಾಭ. ಇದರ ಲಾಭ ಕರ್ನಾಟಕದ ರೈತರಿಗೂ ಸಿಗಲಿದೆ. ಅಂತರ್ಜಲ ಹೆಚ್ಚಿಸಲು ಭೂಜಲ ಯೋಜನೆ ಜಾರಿಗೆ ತಂದಿದ್ದೇವೆ. ದಕ್ಷಿಣ ಭಾರತದಲ್ಲಿ ಕೃಷಿ ಉತ್ಪಾದನೆ ರಪ್ತಿಗೆ ಹೆಚ್ಚು ಮಹತ್ವ ನೀಡಲಾಗಿದೆ. ಬೆಳಗಾವಿ ಮೈಸೂರಿನ ದಾಳಿಂಬೆ. ಚಿಕ್ಕಬಳ್ಳಾಪುರದ ಈರುಳ್ಳಿಗೆ, ಹಾಸನ ಚಿಕ್ಕಮಗಳೂರಿನ ಕಾಫೀ ಉತ್ಫನ್ನಗಳಿಗೆ ಕ್ಲಸ್ಟರ್ ನೀಡಲಾಗಿದೆ ಎಂದರು.
ರಬ್ಬರ್ ಉತ್ಪಾದನೆ ಹೆಚ್ಚಳಕ್ಕೆ ರೈತರಿಗೆ ಪ್ರೋತ್ಸಹ ನೀಡಲಾಗುತ್ತದೆ. ಗೋಡಂಬಿ ಉತ್ಪಾದನೆಗೆ ಹೆಚ್ಚಿನ ಅವಕಾಶವಿದೆ. ರೈತರ ಉತ್ಪಾದನೆಯನ್ನ ಸಂಗ್ರಹಿಸಲು ಶೀತಲಗೃಹಗಳ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.
Key words: Agriculture Karman Award – Farmers-Prime Minister- Modi -tumkur