ಗದಗ,ಆಗಸ್ಟ್,9,2022(www.justkannada.in): ಕೃಷಿ ಸಚಿವ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಬಿಸಿ ಪಾಟೀಲ್ ಇಂದು ಗದಗ ಜಿಲ್ಲೆಯಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಎರಡು ತಿಂಗಳ ಬಳಿಕ ಗದಗ ಜಿಲ್ಲೆಗೆ ಭೇಟಿ ನೀಡಿದ ಸಚಿವ ಬಿಸಿ ಪಾಟೀಲ್ , ಹೊಂಬಳ, ಹೆಚ್ ಎಸ್ ವೆಂಕಟಾಪುರ ಗ್ರಾಮ ಹಾಗೂ ಕೆಲವು ಕಡೆ ಮಳೆ ಹಾನಿ ಪ್ರದೇಶಕ್ಕೆ ಮಾತ್ರ ಭೇಟಿ ನೀಡಿ ಪರಿಶೀಲಿಸಿ ತೆರಳಿದರು.
ಗದಗ – ಬೆಟಗೇರಿ ವ್ಯಾಪ್ತಿಯಲ್ಲಿ ಮಂಜುನಾಥ ಲೇಔಟ್ ಎಸ್. ಎಂ ಕೃಷ್ಣಾ ಬಡಾವಣೆಯಲ್ಲಿ ಮಳೆಯಿಂದಾಗಿ ಅಪಾರ ಹಾನಿ ಉಂಟಾಗಿದ್ದು ಈ ಪ್ರದೇಶಗಳಲ್ಲಿ ಪರಿಶೀಲಿಸಲಿಲ್ಲ. ಕೆಲವುಕಡೆಗಳಲ್ಲಿ ಮಾತ್ರ ತರಾತುರಿಯಲ್ಲಿ ಪರಿಶೀಲಿಸಿ ತೆರಳಿದರು ಎನ್ನಲಾಗಿದೆ. ಇನ್ನು ಸಚಿವರು ಮತ್ತು ಜಿಲ್ಲಾಡಿಳಿತದ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Key words: Agriculture Minister- B.C Patil -visited – inspected – rain -damaged -area.