ಳೂರು, ಏಪ್ರಿಲ್ 12, 2020 (www.justkannada.in) ಕೊರೊನಾ ಲಾಕ್ಡೌನ್ನಿಂದಾಗಿ ರಾಜ್ಯದ ಕೃಷಿ ಚಟುವಟಿಕೆ ಹಾಗೂ ರೈತರ ಮೇಲಿನ ಪರಿಣಾಮಗಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೃಷಿ ಸಚಿವ ಬಿ.ಸಿ.ಪಾಟೀಲ್ ವರದಿ ಸಲ್ಲಿಸಿದರು.
ಏಪ್ರಿಲ್ 6ರಿಂದ ಏ.11ರವರೆಗೆ ಮೊದಲಹಂತದ ಜಿಲ್ಲಾ ಪ್ರವಾಸ ಮುಗಿಸಿರುವ ಕೃಷಿ ಸಚಿವರು ರಾಜ್ಯಾದ್ಯಂತ 19ಜಿಲ್ಲೆಗಳಿಗೆ ಸಂಚರಿಸಿ ಕೊರೊನಾ ನಿರ್ಬಂಧಿತ ಅವಧಿಯಲ್ಲಿ ರೈತರ ಸಮಸ್ಯೆಗಳನ್ನು ಆಲಿಸಿ ಸಭೆ ನಡೆಸಿದ್ದರು. ಮುಂಗಾರು ಹಂಗಾಮಿಗೆ ಇಲಾಖೆ ಸಿದ್ಧತೆಗಳನ್ನು ಪರಿಶೀಲಿಸಿದ್ದಾರೆ. ಸತತ ಎಲ್ಲಾ 19ಜಿಲ್ಲೆಗಳಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು,ರೈತ ಮುಖಂಡರು ಹಾಗು ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ್ದರು.
ಇದೀಗ ಮೊದಲಹಂತದ ಜಿಲ್ಲಾ ಪ್ರವಾಸದ ಕುರಿತು ಸರ್ಕಾರಕ್ಕೆ ಕೃಷಿ ಸಚಿವರು ಇಂದು ಸಂಜೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ವರದಿ ಸಲ್ಲಿಸಿದರು.
ಕಳೆದಏಪ್ರಿಲ್ 7ರಂದು ಕೊಪ್ಪಳ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಣೆಕಲ್ಲು ಗಾಳಿ ಮಳೆಯಿಂದಾಗಿ ಜಿಲ್ಲೆಯ ಗಂಗಾವತಿ, ಯಾದಗಿರಿ ಜಿಲ್ಲೆಯ ಸುರಪುರ ಭಾಗಗಳಲ್ಲಿ ಭತ್ತದ ಪೈರು ಹಾಗಹು ತೋಟಗಾರಿಕಾ ಬೆಳೆಗಳು ನಾಶವಾಗಿದ್ದು, ಬೆಳೆ ಹಾನಿ ಸಮೀಕ್ಷೆ ನಡೆಸಿ ಎನ್.ಡಿ.ಆರ್.ಎಫ್-ಎಸ್.ಡಿ.ಆರ್.ಎಫ್ ಮೂಲಕ ರೈತರಿಗೆ ಪರಿಹಾರ ನೀಡಲು ಕ್ರಮ ಜರುಗಿಸಬೇಕು. ಹಾಗೂ ರಾಜ್ಯಾದ್ಯಂತ ಹೂವಿನ ಬೆಳೆಗಾರರಿಗೆ ನಿರ್ಬಂಧಿತ ಅವಧಿಯಲ್ಲಿ ಹೂ ಮಾರಾಟವಾಗದೇ ಹಾನಿಯಾಗಿರುವುದರಿಂದ ತೋಟಗಾರಿಕಾ ಇಲಾಖೆಯಿಂದ ಬೆಳೆ ಸಮೀಕ್ಷೆ ನಡೆಸಬೇಕು.ಹಾಗೂ ಹೂವಿನ ಬೆಳೆಗಾರರಿಗೆ ಪರಿಹಾರ ಒದಗಿಸಬೇಕೆಂದು ಕೃಷಿ ಸಚಿವರು ವರದಿ ಸಲ್ಲಿಸಿದರು.