ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾರನ್ನ ಭೇಟಿ ಮಾಡಿ ಚರ್ಚಿಸಿದ ಕೃಷಿ ಸಚಿವ  ಬಿ‌.ಸಿ.ಪಾಟೀಲ್

 

ನವದೆಹಲಿ,ಸೆ.9,2020(www.justkannada.in): ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ್ ಭೇಟಿ ಮಾಡಿದರು.jk-logo-justkannada-logo

ಭೇಟಿ ವೇಳೆ,ಬಿ.ಸಿ‌.ಪಾಟೀಲ್ ಕೃಷಿ ಸಚಿವರಾದ ಈ ಆರು ತಿಂಗಳಿನಲ್ಲಿ ಇಲಾಖೆಯಲ್ಲಿ ಮಾಡಿದ ಪ್ರಗತಿಯನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.  ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರೈತರಿಗೆ ಮತ್ತು ಕೃಷಿ ಚಟುವಟಿಕೆಗಳಿಗೆ ಯಾವುದೇ ತೊಂದರೆಯಾದಂತೆ ಅನ್ನದಾತರಿಗೆ ಬೆನ್ನೆಲಬಾಗಿ ನಿಂತ ಕೃಷಿ ಸಚಿವರ ಸೇವೆಯನ್ನು ಜೆ.ಪಿ.ನಡ್ಡಾ ಶ್ಲಾಘಿಸಿದರು.

ರೈತ ಬೆಳೆ ಸಮೀಕ್ಷೆ ಆ್ಯಪ್, ಅಗ್ರಿ ಸ್ಟಾರ್ಟಪ್ ಸೇರಿದಂತೆ ಹಲವಾರು ಪ್ರಗತಿಪರ ಯೋಜನೆಗಳನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಜಾರಿಗೊಳಿಸಿ ಮೆಚ್ಚುಗೆ ವ್ಯಕ್ತವಾಗಿದ್ದರಿಂದ ದೇಶದ ಇತರೆ ರಾಜ್ಯಗಳಲ್ಲಿಯೂ ಸಹ ಅಳವಡಿಕೆಗೆ ಚಿಂತನೆ ನಡೆಸಲಾಗಿರುವ ಬಗ್ಗೆಯೂ ರಾಷ್ಟ್ರೀಯ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದರು.agriculture-minister-bc-patil-met-bjp-national-president-jp-nadda

ಇದೇ ವೇಳೆ ಕರ್ನಾಟಕದ ರಾಜಕೀಯ ವಿದ್ಯಮಾನವನ್ನು ಹಂಚಿಕೊಂಡ ಅಧ್ಯಕ್ಷರು ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವ ಬಗ್ಗೆಯೂ ಬಿ.ಸಿ.ಪಾಟೀಲರೊಂದಿಗೆ ಚರ್ಚಿಸಿದರು.

Key words: Agriculture Minister- BC Patil -met – BJP national president -JP Nadda