ಮೈಸೂರು,ಅಕ್ಟೋಬರ್,20,2023(www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾದ ಅಂಗವಾಗಿ ಆಯೋಜಿಸಿದ್ದ ರೈತ ದಸರಾದ ವೇದಿಕೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರ ಸರ್ಕಾರ ಮತ್ತು ರಾಜ್ಯದ ಸಂಸದರ ವಿರುದ್ಧ ಕಿಡಿಕಾರಿದರು.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೆಹಲಿಯ ಕೇಂದ್ರ ನಾಯಕರನ್ನ ಭೇಟಿಯಾಗಲು ತೆರಳಿದ್ದ ವೇಳೆ ಒಂದು ಅವಕಾಶವನ್ನು ಕಲ್ಪಿಸಿಕೊಡಲಿಲ್ಲ. ರಾಜ್ಯದ ಸಂಸದರು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಪ್ರಧಾನಿಯನ್ನ ಭೇಟಿಯಾಗಲು ತೆರಳಿದ್ದೆವು. ಸತತ ಎರಡು ತಿಂಗಳಾದರೂ ಭೇಟಿಗೆ ಸಮಯವಕಾಶ ಕೊಡಲಿಲ್ಲ.
ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಸಹ ಭೇಟಿಗೆ ಅವಕಾಶ ನೀಡಲಿಲ್ಲ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ದುರಂತ. ಚುನಾವಣೆ ವೇಳೆ ಜನರು ಈ ಅಂಶಗಳನ್ನ ಗಮನಿಸಿ ಆಯ್ಕೆ ಮಾಡಬೇಕು. ಸುಳ್ಳು ಹೇಳುವವರ ಬಗ್ಗೆ ಜನರು ಸೂಕ್ಷ್ಮವಾಗಿ ಗಮನಿಸಬೇಕು. ವಾಸ್ತವತೆಯನ್ನ ತಿಳಿದುಕೊಳ್ಳಬೇಕು. ಈ ವಿಚಾರದಲ್ಲಿ ನಾವು ನಮ್ಮ ಪ್ರಯತ್ನ ಮಾಡಿದ್ದೇವೆ ಎಂದು ಕೇಂದ್ರ ಬಿಜೆಪಿ ನಾಯಕರು, ಸಂಸದರ ವಿರುದ್ಧ ಕೃಷಿ ಸಚಿವ ಚಲುವರಾಯಸ್ವಾಮಿ ಹರಿಹಾಯ್ದರು.
Key words: Agriculture Minister- Chaluvarayaswamy – against – central government -Raita Dussehra.