ಬೆಂಗಳೂರು,ಸೆಪ್ಟಂಬರ್,21,2021(www.justkannada.in): ವಿದ್ಯಾರ್ಥಿಗಳು ಉದ್ಯೋಗ ಕೇಳುವವರಾಗದೇ ಉದ್ಯೋಗ ಸೃಷ್ಟಿಸುವವರು ವಿದ್ಯಾರ್ಥಿಗಳಾಗಬೇಕು. ಇಂತಹ ವಿದ್ಯಾರ್ಥಿಗಳು ಕೃಷಿ ವಿಶ್ವವಿದ್ಯಾಲಯಗಳಿಂದ ಹೊರ ಬರುತ್ತಿರುವುದು ಹೆಮ್ಮೆಯ ವಿಷಯ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು ಜಿಕೆವಿಕೆ 55ನೇ ಘಟಿಕೋತ್ಸವ ಸಮಾರಂಭದಲ್ಲಿ ಕುಲಾಧಿಪತಿ ಹಾಗೂ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಭಾಗವಹಿಸಿ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಬೋಧಿಸಿ, ಬಂಗಾರದ ಪದಕ ಹಾಗೂ ಪ್ರಮಾಣಪತ್ರ ಡಾಕ್ಟರೇಟ್ ಗೌರವ ನೀಡಿ ಗೌರವಿಸಿ ಬಳಿಕ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ರಾಜ್ಯದಲ್ಲಿ ಕೃಷಿ ಹಾಗೂ ರೈತರ ಅಭಿವೃದ್ಧಿಗೆ ಇಲಾಖೆ ಹಾಗೂ ಸರ್ಕಾರ ಬದ್ಧವಾಗಿದ್ದು, 770 ಕೋಟಿ ರೂ.ಬಂಡವಾಳ ಹೂಡಿಕೆಯಲ್ಲಿ ಕೃಷಿತಂತ್ರಜ್ಞಾನಕ್ಕೆ ಮಹತ್ತರ ಹೆಜ್ಜೆ ಇಟ್ಟು ಇದೇ ಗುರುವಾರ ಕೃಷಿ ಇಲಾಖೆ ಕರ್ನಾಟಕ ಸರ್ಕಾರ ಹೆಸ್ಕಾನ್ ಕಂಪೆನಿ ಜೊತೆ 85%:15%/ರಂತೆ ಒಡಂಬಡಿಕೆ ಮಾಡಿಕೊಳ್ಳುತ್ತಿರುವುದಾಗಿ ಸಚಿವ ಬಿ.ಸಿ.ಪಾಟೀಲ್ ಮಾಹಿತಿ ನೀಡಿದರು.
ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳು ಸಾಕಷ್ಟು ವಿಷಯಗಳಲ್ಲಿ ಸಾಧನೆ ಮಾಡುತ್ತಿರುವುದನ್ನು ನೋಡಿದರೆ ಕೃಷಿಯತ್ತ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಿರುವುದು ಕಂಡುಬರುತ್ತದೆ.ವಿದ್ಯಾರ್ಥಿಗಳು ಇಷ್ಟಕ್ಕೆ ತಮ್ಮ ಸಾಧನೆ ಮುಗಿಯಿತೆಂದು ಭಾವಿಸದೇ ಕೃಷಿ ಅಭಿವೃದ್ಧಿಯಲ್ಲಿ ತಮ್ಮ ವಿದ್ಯೆ ತಂತ್ರಜ್ಞಾನವನ್ನು ಬಳಸಿ ಪ್ರಗತಿಪರರಾಗಬೇಕು.ಕೃಷಿ ಉದ್ಯಮ ನವೋದ್ಯಮ ಪ್ರಾರಂಭಿಸಬೇಕಿದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಆಶಯ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬೆನ್ನೆಲೆಬು ರೈತ ಎನ್ನುವುದನ್ನು ಮನಗಂಡು ರೈತರ ಆದಾಯ ದ್ವಿಗಿಣ ಮಾಡಲು ದೃಢ ಸಂಕಲ್ಪದ ಹೆಜ್ಜೆ ಇಟ್ಟು ಆಹಾರ ಉತ್ಪಾದಕ ಸಂಸ್ಥೆಗಳಿಗಾಗಿ ಹೆಚ್ಚು ಆದ್ಯತೆ ನೀಡಿದ್ದಾರೆ. ರೈತರ ಆದಾಯ ಹೆಚ್ಚಳಕ್ಕೆ ತಂತ್ರಜ್ಞಾನ ಬಳಸಿಕೊಳ್ಳಬೇಕು. ವಿದ್ಯೆ ಹಾಗೂ ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆಯಿದ್ದರೆ ಯಾವುದೇ ಕಾಲೇಜಾಗಲೀ ವಿಶ್ವವಿದ್ಯಾಲಯವಾಗಲೀ ಬೆಳಕಿಗೆ ಬಂದೇ ಬರುತ್ತದೆ. ಕೃಷಿಕರ ಆದಾಯ ದ್ವಿಗುಣಗೊಳಿಸಲು ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ತಿಳಿಸಿದರು.
ಕೃಷಿ ಭೂಮಿ ತಾಯಿಯನ್ನು ನಂಬಿದರೆ ಎಂದಿಗೂ ಕೈಬಿಡುವುದಿಲ್ಲ. ಉದ್ಯೋಗವನ್ನು ಅರಸಿ ಬೇರೆಡೆಗೆ ಹೋಗುವುದಕ್ಕಿಂತ ಇರುವ ವಿದ್ಯೆ ತಂತ್ರಜ್ಞಾನವನ್ನು ಬಳಸಿ ಕೃಷಿಯಲ್ಲಿಯೇ ಸಾಧನೆ ಮಾಡಬಹುದೆನ್ನುವುದನ್ನು ತೋರಿಸಿಕೊಡುತ್ತಿದ್ದಾರೆ. ಹೆಚ್ಚೆಚ್ಚು ಐಎಎಸ್ ಐಪಿಎಸ್ ಗಳಲ್ಲಿ ಕೃಷಿ ವಿದ್ಯಾರ್ಥಿಗಳೇ ಮುಂದೆ ಬರುತ್ತಿರುವುದು ಸಂತಸದ ವಿಷಯ ಎಂದು ಸಚಿವ ಬಿಸಿ ಪಾಟೀಲ್ ಹೇಳಿದರು.
ಆನ್ಲೈನ್ ಮೂಲಕ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಐಸಿಆರ್ ಕಾರ್ಯದರ್ಶಿಗಳಾದ ಡಾ.ತ್ರಿಲೋಚನಾ ಮೊಹಪಾತ್ರ ಪಾಲ್ಗೊಂಡರು. ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ರಾಜೇಂದ್ರ ಪ್ರಸಾದ್ ಸ್ವಾಗತಿಸಿ ವಿಶ್ವವಿದ್ಯಾಲಯದ ಸಾಧನೆ ಹಾಗೂ ನಡೆದು ಬಂದ ಹಾದಿಯನ್ನು ವಿವರಿಸಿದರು. ಆಡಳಿತ ಮಂಡಳಿ, ಶೈಕ್ಷಣಿಕ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತ್ತರರ ಉಪಸ್ಥಿತರಿದ್ದರು.
Key words: Agriculture –students- need – job creators-Minister -BC Patil.
ENGLISH SUMMARY…
‘Agriculture students should become job creators’: Minister B.C. Patil
Bengaluru, September 21, 2021 (www.justkannada.in): Agriculture Minister B.C. Patil today opined that the students should become job creators instead of hunting for jobs. “It is indeed very happy to see students graduating from agricultural sciences are becoming such job creators,” he observed.
He participated in the 55th Convocation of the Gandhi Krishi Vignan Kendra (GKVK) in Bengaluru today. Chancellor and Hon’ble Governor of Karnataka Sri Thawar Chand Gehlot participated in the convocation and gave the oath to the students. Apart from according Ph.D. to eligible candidates, he also distributed gold medals and certificates to the rank holders.
Speaking on the occasion Agriculture Minister B.C. Patil informed that the State Government is committed to the development of the agricultural sector and farmers in the State. “The Agriculture Department has taken a significant step by entering in an agreement with the HESCON Company in the agricultural technology sector with an investment of Rs. 770 crore, at the ratio of 85%:15%,” he informed.
“Prime Minister Narendra Modi has vowed to increase the income of the farmers of the country who are in fact the spine of the Indian economy. In this context, he is giving more preference to the food production companies. He wants more adoption of technology in order to increase the income of the farmers. Education and talent don’t belong to any one person. Any person, college, or university who has talent will come to the limelight. The governments have implemented several programs in order to double the income of the farmers,” he explained.
ICAR Secretary Dr. Trilochana Mohapatra participated in the convocation virtually. Dr. Rajendra Prasa, Vice-Chancellor, Agriculture University welcomed the guests and the gathering and also explained the achievements of the college. Administrative board members, education board members, and others were present.
Keywords: GKVK/ Bengaluru/ 55th Convocation/ Agriculture Minister/ B.C. Patil/ Governor Thawar Chand Gehlot